ಕನ್ನಡದ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡಾ ಕಿಕಿ ಚಾಲೆಂಜ್ ಸ್ವೀಕರಿಸಿ, ಚಲಿಸುತ್ತಿರುವ ಕಾರಿನಿಂದ ಇಳಿದು ಹಾಡು ಹೇಳುತ್ತಾ ಡಾನ್ಸ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ನಟಿ ಪ್ರಣಿತಾ ಕೂಡಾ ಕಿಕಿ ಡ್ಯಾನ್ಸ್ ಮಾಡಿದ್ದಾರೆ. 

ಬೆಂಗಳೂರು (ಆ. 01): ನಿವೇದಿತಾ ಗೌಡ ಕಿಕಿ ಡಾನ್ಸ್ ಬೆನ್ನಲ್ಲೇ ಮತ್ತೊಬ್ಬ ನಟಿ ಕೂಡಾ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಹುಭಾಷಾ ನಟಿ‌ ಪ್ರಣೀತ ಡೇಂಜರ್ ಕಿಕಿ ಡಾನ್ಸ್ ಮಾಡಿರುವ ವೀಡಿಯೋ ಈಗ ಚರ್ಚೆಗೆ ಕಾರಣವಾಗಿದೆ. ಪ್ರಣಿತಾ ಕಿಕಿ ಡಾನ್ಸ್ ಮಾಡಿರುವ ವೀಡಿಯೋವನ್ನು ಇನ್ಸ್ಟಾಗ್ರಾಮ್’ನಲ್ಲಿ ಅಪ್’ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಇಂತಹ ವೀಡಿಯೋ ಚಿತ್ರೀಕರಿಸಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ನಟಿ ಪ್ರಣೀತ ವೀಡಿಯೋ ಗೆ ಇನ್ನಿಲ್ಲದ ವಿರೋಧ ವ್ಯಕ್ತವಾಗುತ್ತಿದೆ . 

ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇಂಥಾ ವೀಡಿಯೋಗಳು ಸಮಾಜಕ್ಕೆ ಯುವಜನತೆಗೆ ಮಾರಣಾಂತಿಕ ಅನ್ನೋದು ಅಭಿಮಾನಿಗಳ ಅಭಿಪ್ರಾಯ.

View post on Instagram