ರುದ್ರಿ ಅವತಾರ ತಾಳಿದ್ದಾರೆ ನಟಿ ಪಾವನಾ

Actress Pavana upcoming movie 'Rudri' ; Pavana plays a different Role
Highlights

ಹಳ್ಳಿ ಹುಡುಗಿಯೊಬ್ಬಳು ಲೈಂಗಿಕ ದೌರ್ಜನ್ಯಗಳ ವಿರುದ್ಧ  ಹೇಗೆ ಸಮರ ಸಾರಿ, ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾಳೆಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. ಕೊಪ್ಪ ಜಿಲ್ಲೆ ಕಾಕನೂರು ಎಂಬಲ್ಲಿ ಇದರ ಬಹುತೇಕ ಚಿತ್ರೀಕಣ ನಡೆದಿದೆ. ನಟಿ ಪಾವನಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

‘ಜಟ್ಟ’ ಖ್ಯಾತಿಯ ನಟಿ ಪಾವನಾ ಎಲ್ಲಿ ಹೋದರು ಎನ್ನುವ ಸಿನಿ ಪ್ರಿಯರ ಪ್ರಶ್ನೆಗೆ ಕೊನೆಗೂ ಉತ್ತ ಸಿ ಕ್ಕಿದೆ. ‘ಜಾಕ್ಸನ್’ ಚಿತ್ರದ ನಂತ ಅ ವರು ‘ರುದ್ರಿ’ ಅವತಾರದೊಂದಿಗೆತೆರೆಗೆಮೇಲೆಬರಲು ರೆಡಿ ಆಗಿದ್ದಾರೆ. ಈ ಚಿತ್ರದ ಹೆಸರು ‘ರುದ್ರಿ’. ಯುವ ನಿರ್ದೇಶಕ ದೇವೇಂದ್ರ ಬಡಿಗೇರ್ ನಿರ್ದೇಶನದ ಚಿತ್ರ.ಇಲ್ಲಿಪಾವನಾ ಅವರದ್ದೇ ಪ್ರಮುಖ ಪಾತ್ರ. ಇದೊಂದು ಮಹಿಳಾ  ಪ್ರಧಾನ ಚಿತ್ರ ಎನ್ನುವುದೇ ಇದಕ್ಕೆ ಕಾರಣ.

ಹಳ್ಳಿ ಹುಡುಗಿಯೊಬ್ಬಳು ಲೈಂಗಿಕ ದೌರ್ಜನ್ಯಗಳ ವಿರುದ್ಧ  ಹೇಗೆ ಸಮರ ಸಾರಿ, ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾಳೆಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. ಕೊಪ್ಪ ಜಿ ಲ್ಲೆ ಕಾಕನೂರು ಎಂಬಲ್ಲಿ ಇದರ ಬಹುತೇಕ ಚಿತ್ರೀಕರಣ  ನಡೆದಿದೆ. ಚಿತ್ರದ ಪಾತ್ರಮತ್ತು ಚಿತ್ರೀಕಣ ದ ಅನುಭವವಿಶೇಷ ಎನ್ನುವುದು ನಟಿ ಪಾವನಾ ಮಾತು.

‘ಜಾಕ್ಸನ್ ಚಿತ್ರದ ನಂತರ ಹೊಸ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದು ನನ್ನ ಆಸೆಯಾಗಿತ್ತು. ಹಾಗಾಗಿ ಹೊಸ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಒಂದಷ್ಟು ಸಮಯ ಸರಿದು ಹೋಯಿತು. ಆ ಸಮಯದಲ್ಲಿ ರುದ್ರಿಯ ಆಫರ್ ಬಂತು. ನಿರ್ದೇಶಕ ದೇವೇಂದ್ರ ಬಡಿಗೇರ್‌ ಭೇಟಿ ಮಾಡಿ ಕತೆ ಹೇಳಿದ್ರು. ಪಾತ್ರ  ತುಂಬಾ ಇಷ್ಟವಾಯಿತು. ಹಾಗಾಗಿ ಈ ಚಿತ್ರ  ಒಪ್ಪಿಕೊಂಡು, ಚಿತ್ರೀಕಣ ಕ್ಕೆ ಬಂದೆ. ಕತೆ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ.

ಹಾಗಾಗಿ ಇಲ್ಲಿನ ಭಾಷೆಯನ್ನೇ  ಚಿತ್ರದ ಸಂಭಾಷಣೆಯಾಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ಒಂದು ತಿಂಗಳಿಗೂಹೆಚ್ಚು ಕಾಲಕಳೆದಿದ್ದರಿಂದ ಇಲ್ಲಿನ ಗ್ರಾಮೀಣ ಭಾಷೆಯಲ್ಲೇ ಮಾತನಾಡುವುದಕ್ಕೆ ಬರುತ್ತಿದೆ’ ಎನ್ನುತ್ತಾರೆ ಪಾವನಾ. ಸಾಧು ಕೋಕಿಲ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. 

loader