ಮಳೆಗಾಲ ಶುರುವಾದರೆ ಸಾಕು ಡೆಂಗ್ಯೂ, ಚಿಕೂನ್ ಗುನ್ಯಾ ಚರ್ಮ ಕಾಯಿಲೆ... ಜ್ವರ, ನೆಗಡಿ ಹೀಗೆ ಒಂದಲ್ಲಾ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರೆ ಬಗ್ಗೆ ಸರ್ಕಾರದಿಂದ ಜಾಗೃತಿ ವಿಡಿಯೋ ಬಂದರೂ ಅದನ್ನು ನಂಬುವುದಕ್ಕಿಂತ ನಟ-ನಟಿಯರ ಮಾತುಗಳಿಂದ ಪ್ರಭಾವಿತರಾಗುವುದು ಗ್ಯಾರೆಂಟಿ.

‘ಗೊಂಬೆಗಳ ಲವ್’ ಖ್ಯಾತಿಯ ಪಾವನ ಮಳೆಗಾಲದಲ್ಲಿ ಹೊರಗಡೆ ನೀರು ಕುಡಿದು ಅನಾರೋಗ್ಯಕ್ಕೀಡಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ. ತೀವ್ರ ಇನ್ ಫೆಕ್ಷನ್ ಆಗಿದ್ದು ವೈದ್ಯರ ಸಲಹೆ ಮೇರೆಗೆ 2 ತಿಂಗಳುಗಳ ಕಾಲ ಹೈ ಆಂಟಿ ಬಯೊಟಿಕ್ ತೆಗೆದುಕೊಳ್ಳಬೇಕಿದೆ ಎಂದಿದ್ದಾರಂತೆ!