ಪುಟ್ಟಗೌರಿ, ಸತ್ಯಂ ಶಿವಂ ಸುಂದರಂ ನಟಿ ನಯನಾ ಮನೆಗೆ ಗಣೇಶ ಹಬ್ಬಕ್ಕೂ ಮೊದಲೇ ಪುಟಾಣಿ ಗಣೇಶ ಆಗಮಿಸಿದ್ದಾರೆ. ನಯನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ನಯನಾ ಪತಿ ವೆಂಕಟೇಶ್ ಪ್ರಸಾದ್ ಈ ಸಂತಸವನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಮನೆಗೆ ಪುಟಾಣಿ ಅತಿಥಿ ಆಗಮಿಸಿದ್ದಾನೆ. ನಯನಾಗೆ ನಾರ್ಮಲ್ ಹೆರಿಗೆಯಾಗಿದೆ. ಅಮ್ಮ- ಮಗು ಕ್ಷೇಮವಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ನಯನಾ ಮೊಬೈಲ್ ಬಳಸುತ್ತಿಲ್ಲ. ಸದ್ಯದಲ್ಲೇ ಹಿಂತಿರುಗಲಿದ್ದಾರೆ. ನಿಮ್ಮೆಲ್ಲರ ಹಾರೈಕೆ ಧನ್ಯವಾದಗಳು’ ಎಂದಿದ್ದಾರೆ. 

’ಚಿಕ್ಕಮ್ಮ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟವರು ನಯನಾ. ಆ ನಂತರ ಮನೆದೇವ್ರು, ಗಾಳಿಪಟ, ಪುಟ್ಟಗೌರಿ ಮದುವೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಿದ್ದಾರೆ.