ಕಾರ್ತಿಕ್ ಆರ್ಯನ್ ಜೊತೆಗೆ ‘ಲುಕಾ ಚುಪ್ಪಿ’ ಸಿನಿಮಾ ಮಾಡಿ ಅದು ಒಳ್ಳೆಯ ಹಿಟ್ ಕಂಡಮೇಲೆ ಕೃತಿ ಸನೂನ್ ಸೀದಾ ವ್ಯಾಯಾಮ ಶಾಲೆ ಕಡೆಗೆ ನಡೆದಿದ್ದಾರೆ. ಹಾಗೆ ನೋಡಿದರೆ ಕೃತಿ ಈಗ ಇರುವುದೇ ಸಣ್ಣ. ಇನ್ನು ಜಿಮ್‌ಗೆ ಹೋಗಿ ಭರ್ಜರಿ ವರ್ಕ್ ಔಟ್ ಮಾಡಿದರೆ ಇನ್ನೇನು ಗತಿ.

ಹೌದು, ಕೃತಿ ಈಗ ಜಿಮ್‌ನಲ್ಲಿ ಸಖತ್ ಕಸರತ್ತು ಮಾಡುತ್ತಿದ್ದಾರೆ. ಇದನ್ನು ಪ್ರತ್ಯಕ್ಷವಾಗಿ ಕಾಣಬೇಕು ಎಂದರೆ ನೀವೊಮ್ಮೆ ಅವರ ಇನ್ ಸ್ಟಾಗ್ರಾಂ ಪೇಜ್‌ಗೆ ಹೋಗಬೇಕು. ಅಲ್ಲಿ ತಾನು ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ ಕೃತಿ. ಇದಕ್ಕೆಲ್ಲಾ ಕಾರಣ ಅವರ ಮುಂದಿನ ಸಿನಿಮಾ ‘ಹೌಸ್‌ಫುಲ್ ೪’ ಇದ್ದಿರಲೂಬಹುದು. ಇದೇ ವರ್ಷ ಅಕ್ಟೋಬರ್‌ಗೆ ತೆರೆಗೆ ಬರಲು ಸಿದ್ಧವಾಗಿರುವ ಅಕ್ಷಯ್ ಕುಮಾರ್, ಕೃತಿ ಕರಬಂಧ, ಪೂಜಾ ಹೆಗಡೆ ಮೊದಲಾದ ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ತಾನು ಮತ್ತಷ್ಟು ಸ್ಲಿಮ್ ಆಗಿ ಕಾಣಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಎಡಬಿಡದೇ ಬೆವರು ಹರಿಸುತ್ತಿದ್ದಾರೆ.

ಇದರೊಂದಿಗೆ ತಮ್ಮ ವರ್ಕ್ ಔಟ್‌ನ ವಿಡಿಯೋ ಶೇರ್ ಮಾಡಿ ಅದು ಮತ್ತಷ್ಟು ಅಭಿಮಾನಿಗಳಿಗೆ ಸ್ಫೂರ್ತಿಯಾಗಲಿ ಎನ್ನುವ ಉದ್ದೇಶವೂ ಕೃತಿಗೆ ಇದೆ. ಇದೆಲ್ಲಾ ಮುಗಿದ ಮೇಲೆ ಮುಂದಿನ ಚಿತ್ರದಲ್ಲಿ ಮತ್ತಷ್ಟು ಫಿಟ್ ಆ್ಯಂಡ್ ಫೈನ್ ಆಗಿ ಕೃತಿಯನ್ನು ಕಣ್ತುಂಬಿಕೊಳ್ಳಬಹುದು. ಕೃತಿ ಈಗ ಜಿಮ್‌ನಲ್ಲಿ ಸಖತ್ ಕಸರತ್ತು ಮಾಡುತ್ತಿದ್ದಾರೆ. ಇದನ್ನು ಪ್ರತ್ಯಕ್ಷವಾಗಿ ಕಾಣಬೇಕು ಎಂದರೆ
ನೀವೊಮ್ಮೆ ಅವರ ಇನ್ ಸ್ಟಾಗ್ರಾಂ ಪೇಜ್‌ಗೆ ಹೋಗಬೇಕು. 

View post on Instagram