ಶ್ರೀ ರೆಡ್ಡಿ ವಿರುದ್ಧ ಗರಂ ಆಗಿದ್ದ ನಟಿ ಕವಿತಾಗೆ ಜೀವ ಬೆದರಿಕೆ

Actress Kavitha Got Threat Call
Highlights

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎನ್ನುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ತೆಲುಗು ನಟಿ ಶ್ರೀ ರೆಡ್ಡಿ ವಿರುದ್ಧ ಗರಂ ಆಗಿದ್ದ ಸ್ಯಾಂಡಲ್​ವುಡ್ ನಟಿ ಕವಿತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬೆಂಗಳೂರು : ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎನ್ನುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ತೆಲುಗು ನಟಿ ಶ್ರೀ ರೆಡ್ಡಿ ವಿರುದ್ಧ ಗರಂ ಆಗಿದ್ದ ಸ್ಯಾಂಡಲ್​ವುಡ್ ನಟಿ ಕವಿತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇತ್ತೀಚೆಗಷ್ಟೇ ತೆಲುಗು ನಟಿ ಶ್ರೀ ರೆಡ್ಡಿ, ಟಾಲಿವುಡ್​​ನಲ್ಲಿ ಬಹಳ ಕೀಳಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತದೆ. ಜೊತೆಗೆ ಲೈಂಗಿಕ ಕಿರುಕುಳ ಸರ್ವೆ ಸಾಮಾನ್ಯವಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ನಟಿ ಶ್ರೀ ರೆಡ್ಡಿ ಅರೆ ಬೆತ್ತಲೆಯಾಗಿ ಪ್ರತಿಭಟಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

ಇದರ ಬೆನ್ನಲ್ಲೇ, ಈ ಕುರಿತು ಸ್ಯಾಂಡಲ್​​ವುಡ್​ ನಟಿ ಕವಿತಾ, ಅರೆಬೆತ್ತಲೆಯಾದ ವಿಡಿಯೋ ಮಾಡಿ, ಅದರಲ್ಲಿ ಯಾವುದೇ ಇಂಡಸ್ಟ್ರಿ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಿ ಮಾತ ನಾಡಬೇಕು. ಇಲ್ಲವಾದಲ್ಲಿ ಆಯಾ ಸಿನಿಮಾ ಇಂಡಸ್ಟ್ರಿಗಳ ಲೆಜೆಂಡ್​ಗಳಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಹೇಳಿ ಶ್ರೀರೆಡ್ಡಿಗೆ ಟಾಂಗ್​ ಕೊಟ್ಟಿದ್ದರು. ಅಲ್ಲದೇ ಅದರಲ್ಲಿ ಬಟ್ಟೆ ಬಿಚ್ಚಿ ಬೋಲ್ಡ್ ಆಗಿರುವುದು ಹೇಗೆಂದು ಹೇಳಿದ್ದರು.  

ಇದರ ಬೆನ್ನಲ್ಲೇ ನಟಿ ಕವಿತಾಗೆ ಇದೀಗ ಜೀವ ಬೆದರಿಕೆ ಫೋನ್​ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.  24 ಗಂಟೆಯೊಳಗೆ ನೀನು ಪೋಸ್ಟ್​ ಮಾಡಿರುವ ವಿಡಿಯೋ ಡಿಲೀಟ್​ ಮಾಡಬೇಕು. ಅಲ್ಲದೇ ನೀನು ಅಪ್​ಲೋಡ್​ ಮಾಡಿರುವ ವಿಡಿಯೋ ಬಗ್ಗೆ ಕ್ಷಮೆಯಾಚಿಸಿ ಮತ್ತೊಂದು ವಿಡಿಯೋ ಅಪ್​ಲೋಡ್ ​ಮಾಡಬೇಕು, ಇಲ್ಲವಾದಲ್ಲಿ ನಿನ್ನ ಕಥೆ ಮುಗಿಸಲಾಗುತ್ತದೆ ಎಂದು  ಬೆದರಿಕೆ ಒಡ್ಡಲಾಗಿದೆ ಎಂದು ಕವಿತಾ ಹೇಳಿದ್ದಾರೆ.

ಈ ಕುರಿತು ನಟಿ ಕವಿತಾ ನಿನ್ನೆ ತಡ ರಾತ್ರಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ್ದು,   ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬಾರದ ಕಾರಣ ಸೈಬರ್ ಪೊಲೀಸರಿಗೆ ನೀಡುವಂತೆ ಉಪ್ಪಾರಪೇಟೆ ಠಾಣೆ ಪೊಲೀಸರು ಕವಿತಾಗೆ ಸಲಹೆ ನೀಡಿದ್ದಾರೆ.

loader