ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾನ್ ಡ್ಯಾನ್ಸರ್ಸ್ ಹಾಗೂ ಡ್ಯಾನ್ಸರ್ಸ್ ರಿಯಾಲಿಟಿ ಶೋ ’ತಕಧಿಮಿತಾ’ ದಿನೇ ದಿನೇ ರಂಗೇರುತ್ತಿದೆ. ಈ ವಾರ ಕ್ರಿಯೇಟಿವ್ ಪರ್ಫಾಮೆನ್ಸ್ ಇಡಲಾಗಿತ್ತು. ಅದರಲ್ಲಿ ನಟಿ ಕಾರುಣ್ಯ ತಮ್ಮ ಪಾರ್ಟ್ ನರ್ ಜೊತೆ ಸ್ಕೋರ್ ಬೋರ್ಡ್ ನಲ್ಲಿ ಡ್ಯಾನ್ಸ್ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.

ರವಿಚಂದ್ರನ್‌ ಮಗಳ ಮದುವೆ ಕಾರ್ಡ್‌ ಬೆಲೆ ಇಷ್ಟೊಂದಾ?

 

ಡ್ಯಾನ್ಸ್ ಬಾರದ ಕಾರುಣ್ಯ ಸೂಪರ್ ಡ್ಯಾನ್ಸರ್ಸ್ ಟಫ್ ಕಾಂಪಿಟೇಷನ್ ಆಗಿ ಸ್ಕೋರಿಂಗ್ ಪಟ್ಟಿಯಲ್ಲಿದ್ದರು. ಆದರೆ ಕಾರಣಾಂತರಗಳಿಂದ ಪಟ್ಟಿಯಿಂದ ಕೆಳಗಿಳಿದು ಡೇಂಜರ್ ಜೋನ್ ನಲ್ಲಿದ್ದರು. ಕಾರುಣ್ಯಳಿಗೆ ಟ್ಯಾಲೆಂಟ್ ಇದೆ ಮತ್ತೊಂದು ಅವಕಾಶ ನೀಡಬಹುದು ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಈ ವಾರ ನೋ ಎಲಿಮಿನೇಷನ್ ಎಂದು ಹೇಳಿ ಮತ್ತೊಂದು ಅವಕಾಶ ನೀಡಿದರು.

ತಮಗೆ ಮತ್ತೊಂದು ಅವಕಾಶ ನೀಡಿ ತಮ್ಮಲ್ಲಿರುವ ಟ್ಯಾಲೆಂಟ್ ಪ್ರೂವ್ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟ ರವಿಚಂದ್ರನ್ ಗೆ ಥ್ಯಾಂಕ್ಸ್ ಹೇಳುತ್ತಾ ಕಾರುಣ್ಯ ಕಣ್ಣೀರಿಟ್ಟರು.