ಬಾಲಿವುಡ್ ಯಂಗ್ ಮಮ್ಮಿ ಕರೀನಾ ಕಪೂರ್ ಖಾನ್ ಇಂದು ಸೋಷಿಯಲ್ ಮೀಡಿಯಾದ ಫಿಟ್‌ನೆಸ್ ಕ್ವೀನ್. ಕೈಯಲ್ಲೊಂದು ವಾಟರ್ ಬಾಟಲ್ ಹಿಡಿದು, ಜಿಮ್ ಸೂಟ್ ಅಥವಾ ಟ್ರ್ಯಾಕ್ ಸೂಟ್‌ನಲ್ಲಿಯೇ ಹೆಚ್ಚಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಾರೆ.

ಬಾಲಿವುಡ್ ಬಾಕ್ಸ್ ಆಫೀಸ್ ಚಿತ್ರ 'ದಬಾಂಗ್ - 2'ರಲ್ಲಿ ಇರುವ ಐಟಂ 'ಫೆವಿಕಲ್ ಸೇ' ಹಾಡಿಗೆ ಡ್ಯಾನ್ಸ್ ಮಾಡಲು ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಪರ್ಮಿಷನ್ ಕೇಳಿದ್ರಂತೆ!

2012ರಲ್ಲಿ ಸೈಫ್ ಅಲಿ ಖಾನ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿರಿಸಿದರು ಕರೀನಾ. ಮದುವೆಯಾದ ಕೆಲವೇ ದಿನಗಳಲ್ಲಿ ಈ ಐಟಂ ಹಾಡಿನ ಚಿತ್ರೀಕರಣವಿತ್ತಂತೆ. ಏನು ಮಾಡುವುದೆಂದು ತೋಚದೆ, ಪತಿ ಪರ್ಮಿಷನ್ ಕೇಳಿದ್ರಂತೆ! ಬಾಲಿವುಡ್‌ನ ನಂ. 1 ಆ್ಯಕ್ಟ್ರೆಸ್ ಸಹ ಕೆಲವು ನಿರ್ಧಾರಗಳಿಗೆ ಪತಿ ಮೇಲೆ ಅವಲಂಬಿತರಾಗಿರುತ್ತಾರೆನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

'ಇದು ಸಲ್ಮಾನ್ ಖಾನ್ ಅಭಿನಯದ ಚಿತ್ರ, ಅದರಲ್ಲಿ ನೀನು ಆ್ಯಕ್ಟ್ ಮಾಡಲು ನನ್ನ ಅಭ್ಯಂತರವೇ ಇಲ್ಲ. ನಿನ್ನ ಆಯ್ಕೆ, ನಿನ್ನಿಷ್ಟ, go ahead'ಎಂದಿದ್ದರಂತೆ. ಪತಿಯ ಪ್ರೋತ್ಸಾಹದಿಂದ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡು, ಸಿಕ್ಕಾಪಟ್ಟೆ ಹಿಟ್ ಆಗಿದ್ದೀಗ ಇತಿಹಾಸ.