ನೀವು ನೆಮ್ಮದಿಯಿಂದ ಇರಬೇಕಾ? ಹೌದು ಎಂದಾದರೆ ಈ ಎರಡು ಕೆಲಸ ಮಾಡಿ ಸಾಕು. ಒಂದು ಮತ್ತೊಬ್ಬರ ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇನ್ನೊಂದು ಯಾವಾಗೂ  ಬ್ಯುಸಿಯಾಗಿರಿ. ಹೀಗೆ ಬಾಲಿವುಡ್ ಮಂದಿಗೆ ಅದರಲ್ಲೂ ಮುಖ್ಯವಾಗಿ ನಟಿಯರಿಗೆ ಟಿಪ್ಸ್ ಕೊಟ್ಟಿರುವುದು ಕಾಜೊಲ್.

ಕಾಜೊಲ್ ಹೀಗೆ ಹೇಳಲು ಕಾರಣ ಯಾರೋ ಅನಾಮಿಕರು ಅವರ ಬಳಿ ಸೌಂದರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡು ‘ಹುಟ್ಟುತ್ತ ಎಲ್ಲರೂ ಸುಂದರವಾಗಿಯೇ ಇರುತ್ತಾರೆ. ನಾವು ನಮ್ಮನ್ನು ಕನ್ನಡಿಯ ಮುಂದೆ ನೋಡುವುದಕ್ಕಿಂತಲೂ ಮೊದಲಿಗೆ ನಮ್ಮನ್ನು ಈ ಸಮಾಜ ಕಂಡಿರುತ್ತದೆ.  ಅವರವರ ಪಾಲಿಗೆ ಎಲ್ಲರೂ ಸುಂದರವಾಗಿಯೇ ಕಾಣುವುದರಿಂದ ಮತ್ತೊಬ್ಬರ ಸೌಂದರ್ಯದ ಬಗ್ಗೆ ನಾವು ಅಸೂಯೆಪಟ್ಟುಕೊಳ್ಳಬಾರದು. ಇದು ನಾನು ಸ್ವತಃ ಕಲಿತ ಪಾಠ.

ಮತ್ತೊಂದು ನೀನು ಯಾವಾಗಲೂ ಬ್ಯುಸಿಯಾಗಿದ್ದರೆ ಕೆಟ್ಟ ಯೋಜನೆಗಳು ಹತ್ತಿರ ಸುಳಿಯುವುದಿಲ್ಲ. ಹಾಗಾಗಿ ಏನಾದರೂ ಕೆಲಸ ಮಾಡುತ್ತಲೇ ಇರು. ಏನೂ ಕೆಲಸ ಇಲ್ಲದಿದ್ದರೆ ಒಂದು ವಸ್ತುವನ್ನು ಹತ್ತು ಬಾರಿ
ಅತ್ತಿಂದ ಇತ್ತ, ಇತ್ತಿಂದ ಅತ್ತ ಎತ್ತಿಡು. ಒಟ್ಟಿನಲ್ಲಿ ಏನಾದರೊಂದು ಕೆಲಸ ಮಾಡುತ್ತಲೇ ಇರು ಎಂದು ನನ್ನ ಮನೆಯವರು ಕಲಿಸಿಕೊಟ್ಟಿದ್ದಾರೆ. ಇವರೆಡರಿಂದಲೇ ನಾನು ನೆಮ್ಮದಿಯಿಂದ ಇದ್ದೇನೆ’ ಎಂದು ತಮ್ಮ ನೆಮ್ಮದಿಯ ಗುಟ್ಟು ಹೇಳುವ ಮೂಲಕ ಕೆಲವು ನಟಿಯರಿಗೆ ಟಾಂಗ್  ನೀಡುವ ಕೆಲಸವನ್ನೂ ಮಾಡಿದ್ದಾರೆ.