ಇತ್ತೀಚಿಗೆ ನಟಿಮಣಿಯರ ಮೇಲೆ ಕನ್ನಡ ವಿರೋಧಿಗಳು, ಕನ್ನಡ ಮಾತನಾಡಲು ಬರುವುದಿಲ್ಲ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. 

ನಟಿ ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೆಡ್ ಪ್ರಮೋಶನ್ ವೇಳೆ ನನಗೆ ಕನ್ನಡ ಕಷ್ಟ ಎಂದಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿದ್ದು ಗೊತ್ತೇ ಇದೆ. ಕರ್ನಾಟಕದಲ್ಲಿ ಹುಟ್ಟಿ, ಕನ್ನಡದವರ ಜೊತೆಯೇ ಬೆಳೆದು ನನಗೆ ಕನ್ನಡ ಕಷ್ಟ ಎಂದರೆ ಪಥ್ಯವಾಗದೇ ಇರುವುದು ಸಹಜ ಬಿಡಿ! 

ಏತನ್ಮಧ್ಯೆ ನಟಿ ಹರಿಪ್ರಿಯಾ ಕನ್ನಡಿಗರಿಗೆ, ಅಭಿಮಾನಿಗಳಿಗೆ ಪತ್ರವೊಂದನ್ನು ಬರೆದಿದ್ದು ಗಮನ ಸೆಳೆದಿದೆ. 

 

‘ ನನಗೆ ಕನ್ನಡ ಮಾತನಾಡಲು, ಬರೆಯಲು, ಓದಲು,  ಚೆನ್ನಾಗಿ ಬರುತ್ತದೆ. ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ, ವಿಶ್ವಾಸ, ನಂಬಿಕೆ ಇದೆ. ನಾನು ಮಾಡುವ ಪೋಸ್ಟ್ ಗಳಿಗೆ ಕೆಲವೊಮ್ಮೆ ಕನ್ನಡದಲ್ಲಿ ಕನ್ನಡದಲ್ಲಿ ಬರೆಯಿರಿ ಎಂದು ಆಗಾಗ ಅಭಿಮಾನಿಗಳು ಹೇಳುತ್ತಿರುತ್ತಾರೆ. ನನಗೆ ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಎಲ್ಲರಿಗೂ ಅರ್ಥವಾಗಲಿ ಎಂದು ಇಂಗ್ಲೀಷ್ ನಲ್ಲಿ ಪೋಸ್ಟ್ ಮಾಡುತ್ತೇನೆ. ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರೆಂದು ಭಾವಿಸಿದ್ದೇನೆ ’ ಎಂದು ಪತ್ರದಲ್ಲಿ ಬರೆದಿದ್ದಾರೆ. 

ನಟಿ ರಶ್ಮಿಕಾ ಮಂದಣ್ಣ ಕನ್ನಡ ವಿವಾದದ ಬೆನ್ನಲ್ಲಿ ಹರಿಪ್ರಿಯಾ ದಿಢೀರ್ ಪತ್ರ ಕುತೂಹಲ ಮೂಡಿಸಿದೆ.