ಹರಿಪ್ರಿಯಾ ‘ಬೆಲ್‌ ಬಾಟಂ’ ನಂತರ ಸಾಕಷ್ಟುಬ್ಯುಸಿಯಾಗಿದ್ದಾರೆ. ಅವರ ವೃತ್ತಿಜೀವನದಲ್ಲಿ ಈ ವರ್ಷ ಮೊದಲ ಹಿಟ್‌ ಚಿತ್ರವಾಗಿ ನಿಂತಿದ್ದು ಇದೇ ಸಿನಿಮಾ. ಇದರ ಪರಿಣಾಮ ಇದೇ ವರ್ಷ ಹೆಚ್ಚು ಕಮ್ಮಿ ಹರಿಪ್ರಿಯಾ ನಟನೆಯ ಸಾಲು ಸಾಲು ಚಿತ್ರಗಳು ತೆರೆಗೆ ಬರುವುದಕ್ಕೆ ಸಜ್ಜಾಗಿವೆ. ಇಷ್ಟಕ್ಕೂ ಹರಿಪ್ರಿಯಾಗೆ ಯಾಕೆ ಇಷ್ಟುಸಿನಿಮಾಗಳು ಬರುತ್ತಿವೆ? ಅವರೇ ಮಾತನಾಡುತ್ತಾರೆ ಕೇಳಿ.

1. ಬೆಲ್‌ಬಾಟಂ ಈ ವರ್ಷ ನನಗೆ ಒಳ್ಳೆಯ ಓಪನಿಂಗ್‌ ಕೊಟ್ಟಿತು. ಈ ಚಿತ್ರದ ನಂತರ ನನ್ನ ನಟನೆಯ ಸಿನಿಮಾಗಳು ಸರದಿಯಾಗಿ ಬರಲಿವೆ. ಸೂಜಿದಾರ, ಡಾಟರ್‌ ಆಫ್‌ ಪಾರ್ವತಮ್ಮ, ಕಂಥಾಸಂಗಮ ಹಾಗೂ ಕುರುಕ್ಷೇತ್ರ ಸಿನಿಮಾಗಳು ಬರುತ್ತಿವೆ.

2. ಈಗಷ್ಟೇ ಮೂರು ಚಿತ್ರಗಳಿಗೆ ಚಿತ್ರೀಕರಣ ಮುಗಿಸಿ ಡಬ್ಬಿಂಗ್‌ ಮಾಡುತ್ತಿದ್ದೇನೆ. ಬಿಚ್ಚುಗತ್ತಿ, ಎಲ್ಲಿದ್ದೆ ಇಲ್ಲಿತನಕ, ಕನ್ನಡ್‌ ಗೊತ್ತಿಲ್ಲ ಚಿತ್ರಗಳಿಗೆ ಡಬ್ಬಿಂಗ್‌ ನಡೆಯುತ್ತಿದೆ. ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿದ್ದಂತೆಯೇ ಈ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಲಿವೆ.

ಪುರುಷರೆಲ್ಲಾ ಕೆಟ್ಟವರಲ್ಲ, ಹುಡುಗಿಯರೆಲ್ಲಾ ಒಳ್ಳೆಯವರೆಲ್ಲ: ಹರಿಪ್ರಿಯಾ

3. ನಾನು ಚಿತ್ರರಂಗಕ್ಕೆ ಬಂದು 12 ವರ್ಷ ಆಯ್ತು. ಒಬ್ಬ ನಟಿಗೆ ಇದು ತುಂಬಾ ಲಾಂಗ್‌ ಲೈಫ್‌ ಅನ್ನಬಹುದು. ಅದರಲ್ಲೂ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಐತಿಹಾಸಿಕ, ಪೌರಾಣಿಕ, ಮಹಿಳಾ ಪ್ರಧಾನ, ಆ್ಯಕ್ಷನ್‌ ಸಿನಿಮಾ, ಪ್ರೇಮ ಕತೆ, ಗ್ಲಾಮರ್‌ ನಟಿ... ಹೀಗೆ ಒಬ್ಬ ನಟಿಗೆ ಬೇರೆ ರೀತಿಯ ಪಾತ್ರಗಳು ಸಿಗುತ್ತಿರುವುದು ನನಗೇ ಇರಬೇಕು. ಅದರಲ್ಲೂ ನಾಯಕ ನಟರೇ ಹೆಚ್ಚಾಗಿ ಮಿಂಚುವ ಸಿನಿಮಾ ಮಾಧ್ಯಮದಲ್ಲಿ ಒಬ್ಬ ನಟಿಗೆ ಇಂಥ ಮಹತ್ವದ ಪಾತ್ರಗಳು ಸಿಗುತ್ತಿರುವುದು ಒಬ್ಬ ನಟಿಯಾಗಿ ನನಗೇ ಹೆಮ್ಮೆ ಅನಿಸುತ್ತಿದೆ.

4. ಒಂದಿಷ್ಟುಸಿನಿಮಾಗಳಲ್ಲಿ ನಟಿಸದ ಮೇಲೆ ನಾನು ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗಬಾರದು ಅಂದುಕೊಂಡೆ. ಆ ಕಾರಣಕ್ಕೆ ಭಿನ್ನ ರೀತಿಯ ಪಾತ್ರಗಳತ್ತ ಗಮನ ಕೊಟ್ಟೆ. ನಾನೇ ಕತೆ ಕೇಳುವುದಕ್ಕೆ ಆರಂಭಿಸಿದೆ. ಹೀಗಾಗಿ ನಟಿಯರನ್ನು ಗ್ಲಾಮರ್‌ ಪಾತ್ರಗಳಿಗೆ ಸೀಮಿತ ಮಾಡುತ್ತಾರೆ ಎನ್ನುವ ಮಾತು ನಾನೇ ಸುಳ್ಳು ಮಾಡಿದ್ದೇನೆ. ಯಾಕೆಂದರೆ ನಮಗೆ ಯಾವ ರೀತಿ ಪಾತ್ರಗಳು ಬರುತ್ತವೆ ಮತ್ತು ಆಯ್ಕೆ ಮಾಡಬೇಕು ಎಂಬುದು ನಮ್ಮ ಕೈಯಲ್ಲಿರುತ್ತದೆ.

5. ಸಿನಿಮಾಗಳ ಬಿಡುಗಡೆ ಸಂಖ್ಯೆ ಕಡಿಮೆ. ಆದರೆ, ಒಪ್ಪಿಕೊಂಡ ಚಿತ್ರಗಳೇ ಹೆಚ್ಚು ಎನ್ನುವವರು ಇದ್ದಾರೆ. ಈ ಮಾತು ನಿಜ. ಯಾಕೆ ನಾನು ಒಪ್ಪಿಕೊಳ್ಳುತ್ತಿದ್ದೇನೆ ಎಂದರೆ ಯಾವುದನ್ನೂ ರಿಜೆಕ್ಟ್ ಮಾಡುವಂತಹ ಕತೆಗಳಾಗಿರಲಿಲ್ಲ. ಯಾಕೆಂದರೆ ‘ನೀವೇ ಬೇಕು’ ಎನ್ನುವ ಯೋಚನೆ ಬಂದ ಚಿತ್ರಗಳು ಇವು. ಬೇಡ ಅನ್ನಲು ಆಗಲಿಲ್ಲ. ಹೀಗಾಗಿ ಚಿತ್ರಗಳ ಸಂಖ್ಯೆ ಹೆಚ್ಚಾಯಿತು.

6. ನನ್ನ ಪ್ರಕಾರ ಚಿತ್ರರಂಗದಲ್ಲಿ ಬೆಸ್ಟ್‌ ಪ್ರಪೋಸರ್‌ ಅಂದರೆ ರೈಟರ್‌. ಒಬ್ಬ ರೈಟರ್‌ ಈ ಪಾತ್ರಕ್ಕೆ ಇಂಥವರೇ ಮಾಡಬೇಕು ಎಂದು ಬರೆದಾಗ, ನಿರ್ದೇಶಕರು ಅದಕ್ಕಂತೆ ಆ ಪಾತ್ರಧಾರಿಗಳನ್ನು ಅಪ್ರೋಚ್‌ ಮಾಡುತ್ತಾರೆ. ಈ ಅಪ್ರೋಚ್‌ನ ಮೂಲ ರೈಟರ್‌. ಈ ಕಾರಣಕ್ಕೆ ಚಿತ್ರರಂಗದಲ್ಲಿ ಬೆಸ್ಟ್‌ ಪ್ರಪೋಸರ್‌ ಅಂದರೆ ರೈಟರ್‌.

8. ನಿಜ ಹೇಳಬೇಕು ಅಂದರೆ ನಾನು ಚಿತ್ರರಂಗಕ್ಕೆ ಬಂದು ಒಂದಿಷ್ಟುವರ್ಷ ಕಳೆದ ಮೇಲೂ ನನಗೆ ಈಗ ಬರುತ್ತಿರುವ ಪಾತ್ರಗಳು ಸಿಗುತ್ತವೆ ಅಂತ ಕನಸಿನಲ್ಲೂ ಊಹೆ ಮಾಡಿರಲ್ಲಿಲ. ಅಂಥ ಪಾತ್ರಗಳಿಗೆ ನಾನು ಆಯ್ಕೆ ಆಗುತ್ತಿದ್ದೇನೆ.

9. ಬಿಚ್ಚುಗತ್ತಿ ಐತಿಹಾಸಿಕ ಚಿತ್ರವಾದರೂ ಬೇಗ ಮುಗಿಯಲು ಕಾರಣ ಅವರು ಮಾಡಿಕೊಂಡಿದ್ದ ಪ್ಲಾನ್‌. ನಿರ್ದೇಶಕ ಹರಿಸಂತೋಷ್‌ ಅವರು ಮೊದಲೇ ಎಲ್ಲ ತಯಾರಿ ಮಾಡಿಕೊಂಡಿದ್ದು. ಸೆಟ್‌ಗಳು ಹಾಕಿಕೊಂಡಿದ್ದರು. ಅಂದುಕೊಂಡಂತೆ ಬೇಗ ಚಿತ್ರೀಕರಣ ಆಯಿತು. ಕ್ವಾಲಿಟಿನಲ್ಲಿ ಎಲ್ಲೂ ರಾಜಿಯಾಗಿಲ್ಲ.