ಈ ಧಾರಾವಾಹಿಗೆ ಹೊಸ ರೀತಿಯಲ್ಲಿ ಪ್ರೋಮೋಗಳನ್ನು ಮಾಡಿದ್ದು, ಇದರಲ್ಲಿ ನಟಿ ಹರಿಪ್ರಿಯಾ ನಟಿಸಿದ್ದಾರೆ. ಸಾಮಾನ್ಯವಾಗಿ ಧಾರಾವಾಹಿಗಳ ಪ್ರೋಮೋಗಳಲ್ಲಿ ಆಯಾ ಧಾರಾವಾಹಿ ಕಲಾವಿದರೇ ಕಾಣಿಸಿಕೊಳ್ಳುತ್ತಾರೆ. ಆದರೆ, ಈ ‘ನಾಯಕಿ’ ಬಗ್ಗೆ ಹೇಳುವುದಕ್ಕಾಗಿಯೇ ಮಾಡಿರುವ ಪ್ರೋಮೋದಲ್ಲಿ ನಟಿ ಹರಿಪ್ರಿಯಾ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.

’ನೀರ್‌ದೋಸೆ’ ಬೆಡಗಿ ಹಾಟ್ ಪೋಟೋಗಳಿಗೆ ಹಾರ್ಟ್ ಬೀಟ್ ಲಬ್ ಡಬ್!

ಶಶಿಧರ್‌ ಕೆ ಧಾರಾವಾಹಿ ನಿರ್ದೇಶಿಸುತ್ತಿದ್ದು, ಸಚಿನ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಈ ನಾಯಕಿ ಕಷ್ಟಗಳನ್ನು ಕೇವಲ ಎದುರಿಸುವುದಲ್ಲ, ಹೆದರಿಸುವ ದಿಟ್ಟೆ. ಸೌಂದರ್ಯ ಎಂಬ ಬಡ ಹುಡುಗಿ ತನ್ನಕುಡುಕ ಅಪ್ಪನನ್ನ ಸಾಕಲು ಮತ್ತು ತಮ್ಮನನ್ನು ಓದಿಸಲು ಪಡುವ ಕಷ್ಟಗಳ ಸುತ್ತ ಸಾಗುವ ಈ ಕತೆಯಲ್ಲಿ ಹೇಮಾ ಚೌಧರಿ ಅವರದ್ದು ಬಡ್ಡಿ ಬಂಗಾರಮ್ಮ ಪಾತ್ರ ಎಂಬುದು ಮತ್ತೊಂದು ವಿಶೇಷ. ಕಾವ್ಯ, ದೀಪಕ್‌ ಮುಂತಾದವರು ನಟಿಸಿದ್ದಾರೆ.

‘ಗಟ್ಟಿಮೇಳ’‘ರಾಧಾ ರಮಣ’ ಧಾರಾವಾಹಿಯ ಅವನಿ ಲುಕ್!