ಪಾಕೀಜಾ ಖ್ಯಾತಿಯ ಗೀತಾ ಕಪೂರ್ ಇನ್ನಿಲ್ಲ..!

Actress Geeta Kapoor Dies
Highlights

ಹಿಂದಿ ಚಿತ್ರರಂಗದ ಮೈಲುಗಲ್ಲು ಚಿತ್ರಗಳಲ್ಲಿ ಒಂದಾದ ಪಾಕೀಜಾ ನಟಿ ಗೀತಾ ಕಪೂರ್ ನಿಧನ ಹೊಂದಿದ್ದಾರೆ. 57 ವರ್ಷದ ಗೀತಾ ಕಪೂರ್ ಮುಂಬೈನ ವೃದ್ಧಾಶ್ರಮವೊಂದರಲ್ಲಿ ಮೃತಪಟ್ಟಿದ್ದಾರೆ. ಗೀತಾ ಕಪೂರ್ ಅವರನ್ನು ಅವರ ಮಕ್ಕಳು ಕಳೆದ ವರ್ಷವಷ್ಟೇ ಮನೆಯಿಂದ ಹೊರ ಹಾಕಿದ್ದರು.

ಮುಂಬೈ(ಮೇ.26):ಹಿಂದಿ ಚಿತ್ರರಂಗದ ಮೈಲುಗಲ್ಲು ಚಿತ್ರಗಳಲ್ಲಿ ಒಂದಾದ ಪಾಕೀಜಾ ನಟಿ ಗೀತಾ ಕಪೂರ್ ನಿಧನ ಹೊಂದಿದ್ದಾರೆ. 57 ವರ್ಷದ ಗೀತಾ ಕಪೂರ್ ಮುಂಬೈನ ವೃದ್ಧಾಶ್ರಮವೊಂದರಲ್ಲಿ ಮೃತಪಟ್ಟಿದ್ದಾರೆ. ಗೀತಾ ಕಪೂರ್ ಅವರನ್ನು ಅವರ ಮಕ್ಕಳು ಕಳೆದ ವರ್ಷವಷ್ಟೇ ಮನೆಯಿಂದ ಹೊರ ಹಾಕಿದ್ದರು.

ಗೀತಾ ಕಪೂರ್ ಅವರನ್ನು ಅವರ ಮಕ್ಕಳು ಕಳೆದ ವರ್ಷವಷ್ಟೇ ಮನೆಯಿಂದ ಹೊರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸಂಸ್ಥೆ ಅವರನ್ನು ಮುಂಬೈನ ವೃದ್ಧಾಶ್ರಮಕ್ಕೆ ಸೇರಿಸಿತ್ತು. ಗೀತಾ ಅವರ ಖರ್ಚು ವೆಚ್ಚಗಳನ್ನು ಫಿಲ್ಮ್ ಬೋರ್ಡ್ ನಿಭಾಯಿಸುತ್ತಿತ್ತು.

ಮಕ್ಕಳು ತಮ್ಮಿಂದ ದೂರವಾದ ಕಾರಣಕ್ಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗೀತಾ, ಮಕ್ಕಳು ತಮ್ಮನ್ನು ವಾಪಸ್ಸು ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂದು ನಂಬಿದ್ದರು. ಆದರೆ ಕೊನೆಗೂ ಆಕೆಯ ಮಕ್ಕಳು ಆಕೆಯನ್ನು ಕಾಣಲು ಬರಲಿಲ್ಲ ಎಂದು ವೃದ್ಧಾಶ್ರಮದ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು. ಇನ್ನು ಗೀತಾ ಅವರ ಪಾರ್ಥೀವ ಶರೀರವನ್ನು ಎರಡು ದಿನಗಳ ಕಾಲ ಕೂಪರ್ ಆಸ್ಪತ್ರೆಯಲ್ಲಿ ಇಡಲಾಗುವುದು. ಒಂದು ವೇಳೆ ಅವರ ಮಕ್ಕಳು ಬರದಿದ್ದರೆ ಫಿಲ್ಮ್ ಬೋರ್ಡ್ ಗೀತಾ ಅವರ ಅಂತ್ಯಸಂಸ್ಕಾರ ನೆರವೇರಿಸಲಿದೆ ಎನ್ನಲಾಗಿದೆ. 

loader