ಬಾಲಿವುಡ್'ಗೆ ಹಾರಿದ್ದಾರೆ ಗಾಯತ್ರಿ ಅಯ್ಯರ್

Actress Gayathri Iyer go to Bollywood
Highlights

ನಟಿ ಗಾಯತ್ರಿ ಐಯ್ಯರ್ ಬಾಲಿವುಡ್‌ಗೆ ಹಾರಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ ಚಿತ್ರ ‘ಟೈಸನ್’ ಬಂದು ಹೋದ ನಂತರ ಗಾಯತ್ರಿ ಎಲ್ಲಿ ಎನ್ನುತ್ತಿದ್ದ ಕನ್ನಡ ಚಿತ್ರ ಪ್ರೇಮಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.

ಬೆಂಗಳೂರು (ಜ.11): ನಟಿ ಗಾಯತ್ರಿ ಐಯ್ಯರ್ ಬಾಲಿವುಡ್‌ಗೆ ಹಾರಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ ಚಿತ್ರ ‘ಟೈಸನ್’ ಬಂದು ಹೋದ ನಂತರ ಗಾಯತ್ರಿ ಎಲ್ಲಿ ಎನ್ನುತ್ತಿದ್ದ ಕನ್ನಡ ಚಿತ್ರ ಪ್ರೇಮಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.

ಹಿಂದಿಯ ‘ರೇಡ್’ ಚಿತ್ರದ ಇಬ್ಬರು ನಾಯಕಿರಲ್ಲಿ ಗಾಯತ್ರಿ ಐಯ್ಯರ್ ಕೂಡ ಒಬ್ಬರು. ಅಂದಹಾಗೆ, ಇದು ಅಜಯ್ ದೇವಗನ್ ಅಭಿನಯದ ಚಿತ್ರ. ಸಪೂರ ಸೊಂಟದ ಚೆಲುವೆ ಇಲಿಯಾನಾ ಡಿಕ್ರೂಸ್ ಇದರ ನಾಯಕಿ. ಇಷ್ಟು ಹೇಳಿದ ಮೇಲೂ ಯಾರು ಈ ಗಾಯತ್ರಿ ಅಂತಲೂ ನಿಮಗನಿಸಬಹುದು. ಯಾಕಂದ್ರೆ ನಟಿ ಗಾಯತ್ರಿ ಐಯ್ಯರ್ ಹುಟ್ಟು ಕನ್ನಡತಿ ಅಲ್ಲ. ಮೂಲತಃ ಕೇರಳದವರು. ಆದರೆ, ಅವರ ಸಿನಿ ಕರಿಯರ್‌'ನಲ್ಲಿ ಕನ್ನಡ ಸಿನಿಮಾಗಳಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು.

‘ಶ್ರಾವಣ’, ‘ನಮೋ ಭೂತಾತ್ಮ’ ಹಾಗೂ ‘ಟೈಸನ್’ ಚಿತ್ರಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದಲ್ಲದೆ, ದರ್ಶನ್ ಅಭಿನಯದ ‘ಜಗ್ಗುದಾದಾ’ ಚಿತ್ರದಲ್ಲಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅಲ್ಲಿಂದೀಗ ಬಾಲಿವುಡ್‌'ನಲ್ಲಿ ಕಾಣಿಸಿಕೊಂಡು ಸಿನಿ ರಸಿಕರ ಗಮನ ಸೆಳೆದಿದ್ದಾರೆ.

‘ಸಿನಿಮಾ ಕೆರಿಯರ್ ಶುರುವಾದ ದಿನಗಳಿಂದಲೂ ಬಾಲಿವುಡ್‌ಗೆ ಬರಬೇಕು ಅನ್ನೋ ಆಸೆಯಿತ್ತು. ಅದಕ್ಕೆ ಕಾಲ ಕೂಡಿ ಬಂದಿದ್ದು ಈಗ. ಅದರಲ್ಲೂ ಅಜಯ್ ದೇವಗನ್ ಅಭಿನಯದ ಚಿತ್ರದಲ್ಲಿ

ಅಭಿನಯಿಸುವ ಅವಕಾಶ ಸಿಕ್ಕಿದೆ. ತುಂಬಾನೆ ಖುಷಿ ಆಗಿದೆ’ ಎನ್ನುತ್ತಾರೆ ನಟಿ ಗಾಯತ್ರಿ ಐಯ್ಯರ್. ಹಾಗಂತ ‘ರೇಡ್’ನಲ್ಲಿ ಗಾಯತ್ರಿ ನಾಯಕಿ ಅಲ್ಲ. ಅಜಯ್ ದೇವಗನ್ ನೇತೃತ್ವದ ರೇಡ್‌ತಂಡದಲ್ಲಿ ಅವರು ಒಬ್ಬರು. ಆದರೂ, ಚಿತ್ರದ ಉದ್ದಕ್ಕೂ ಕಾಣಿಸಿಕೊಳ್ಳುತ್ತಾರಂತೆ. ನಾಯಕಿ ಅಲ್ಲದಿದ್ದರೂ ನಟಿಯಾಗಿ ನನ್ನನ್ನು ನಾನಿಲ್ಲಿ ಗುರುತಿಸಿಕೊಳ್ಳುವುದಕ್ಕೆ ಒಳ್ಳೆಯ ಅವಕಾಶವಂತೂ ಸಿಕ್ಕಿದೆ ಅಂತಾರೆ. ಹೆಸರಾಂತ ನಿರ್ದೇಶಕ ಅಮರ್, ರೇಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಅದ್ಧೂರಿಯಾಗಿಯೇ

ನಿರ್ಮಾಣವಾಗಿದೆಯಂತೆ.

 

loader