ಪೊಲೀಸರು ಬಾಗಿಲು ಮುರಿದು ಕೊಠಡಿಯೊಳಗೆ ಪ್ರವೇಶಿಸಿದಾಗ ಸೀಲಿಂಗ್ ಫ್ಯಾನ್'ಗೆ ನೇಣು ಹಾಕಿಕೊಂಡಿದ್ದರು.

ಧರ್ಮಶಾಲಾ(ಜ.24): ಹಿಮಾಚಲ,ಬೋಚ್ಪುರಿಯ ನಟಿ ರೀಚಾ ಧೀಮಾನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದಿದೆ. ನಟಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಪೊಲೀಸ್ ಪೇದೆಯೊಬ್ಬರು ಕಾರಣರಾಗಿದ್ದಾರೆಂದು ನಟಿಯ ತಾಯಿ ದೂರಿದ್ದಾರೆ. ಮಾಡಲ್ ಕೂಡ ಆಗಿದ್ದ ನಟಿ ರೀಚಾ ಧೀಮಾನ್ ಹಿಮಾಚಲ, ಬೋಚ್ಪುರಿಯ ಜೊತೆ ಹಿಂದಿ ಹಾಗೂ ತೆಲುಗಿನ ಭದ್ರಿನಾಥ್ ಹಾಗೂ ಪಯಣಂ ಚಿತ್ರಗಳಲ್ಲೂ ಅಭಿನಯಿಸಿದ್ದರು.

ರೀಚಾ ತಾಯಿ ಜ.20 ರಂದು ಬೆಳಿಗ್ಗೆ ರೂಮಿನಲ್ಲಿದ್ದ ಆಕೆಯ ಮೊಬೈಲ್'ಗೆ ಹಲವು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಾಗಿಲು ಮುರಿದು ಕೊಠಡಿಯೊಳಗೆ ಪ್ರವೇಶಿಸಿದಾಗ ಸೀಲಿಂಗ್ ಫ್ಯಾನ್'ಗೆ ನೇಣು ಹಾಕಿಕೊಂಡಿದ್ದರು. ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಲಂಪುರ್ ಜಿಲ್ಲೆಯವರಾದ ರೀಚ ಹಿಮಾಚಲದ 100ಕ್ಕೂ ಹೆಚ್ಚು ಮ್ಯೂಸಿಕ್ ವಿಡಿಯೋ'ಗಳು, ಹಿಂದಿ,ತೆಲುಗು ಚಿತ್ರಗಳಲ್ಲಿ ನಟಿಸಿದ್ದರು. 2010ರಲ್ಲಿ ಮಿಸ್ ಹಿಮಾಲಯ ಪ್ರಶಸ್ತಿಗೂ ಭಾಜನರಾಗಿದ್ದರು.