ತಮ್ಮ ಜೀವನದ ಅತ್ಯಂತ ಸಂತೋಷದಾಯಕ ಸುದ್ದಿಯನ್ನು ಹಂಚಿಕೊಂಡಿದ್ದಾರೆ ನಟಿ ದುರ್ಗಾ ಕೃಷ್ಣ.

'ಸಿಂಪ್ಲಿ ದುರ್ಗಾ' ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ನಟಿ ದುರ್ಗಾ ಕೃಷ್ಣ ಇದೀಗ ತಾಯಿಯಾಗಲು ಸಜ್ಜಾಗಿದ್ದಾರೆ. ತಮ್ಮ ಜೀವನದ ಅತ್ಯಂತ ಮಹತ್ವದ ಸಂಗತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮೊದಲ ವಿಡಿಯೋದಲ್ಲಿ ಈ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ.

'ನಮ್ಮ ಹೊಸ ಎಪಿಸೋಡ್ ಶುರುವಾಗಿದೆ' ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ ದುರ್ಗಾ. ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಮುಂದಿನ ದಿನಗಳಲ್ಲಿ ಇತರ ವಿಶೇಷಗಳನ್ನು ಯೂಟ್ಯೂಬ್ ಚಾನೆಲ್ ಮೂಲಕ ತಿಳಿಸುವುದಾಗಿ ದುರ್ಗಾ ಹೇಳಿದ್ದಾರೆ.

ಇದನ್ನೂ ಓದಿ: ₹250 ಕೋಟಿ ಮೌಲ್ಯದ ಆಸ್ತಿಯನ್ನ ತನ್ನ 2 ವರ್ಷದ ಮಗಳಿಗೆ ಬಿಟ್ಟ ಈ ಸ್ಟಾರ್ ಹೀರೋ ಯಾರು?

೨೦೨೧ರ ಏಪ್ರಿಲ್ ೨೧ರಂದು ನಿರ್ಮಾಪಕ ಹಾಗೂ ಉದ್ಯಮಿ ಅರ್ಜುನ್ ರವೀಂದ್ರನ್ ಅವರನ್ನು ದುರ್ಗಾ ಕೃಷ್ಣ ವಿವಾಹವಾಗಿದ್ದರು. ಗುರುವಾಯೂರ್ ದೇವಸ್ಥಾನದಲ್ಲಿ ನಡೆದ ವಿವಾಹದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.