ಹಿಂದಿನ ಕಾಲದಲ್ಲಿ ಐಟಂ ಸಾಂಗ್ ಎಂದಾಕ್ಷಣ ನೆನಪಾಗುವುದು ನಟಿ ಶಾಂತಿ ಅಲಿಯಾಸ್ ಡಿಸ್ಕೋ ಶಾಂತಿ. ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಮಾಲ್ ಮಾಡಿದ ನಟಿಯ ಪುತ್ರ ಯಾವ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬುವುದು ಸಹಜ ಕುತೂಹಲ.

ರಶ್ಮಿಕಾ ಮಂದಣ್ಣ ಸಕ್ಸಸ್ ಏರುತ್ತಿದ್ದಂತೆ ಸಂಭಾವನೆಯೂ ಏರುತ್ತಿದೆ!

ಶಾಂತಿ ಪುತ್ರ ಮೇಘಾಂಶ್ ತನ್ನ ತಾಯಿ ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿಯನ್ನು ಗಮಸಿನಿ ಅದೇ ಹಾದಿ ಬಯಸಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಬಟ್‌ ಲಾಂಚ್ ಆಗುತ್ತಿರುವುದು ಕಾಲಿವುಡ್‌ 'ರಾಜಧೂತ್' ಸಿನಿಮಾದ ಮೂಲಕ. ಈ ಚಿತ್ರದಲ್ಲಿ ಮೇಘಾಂಶ್ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಲಕ್ಷ್ಯ ಬ್ಯಾನರ್‌ನ ಸತ್ಯ ನಾರಾಯಣ ಎಂಬುವರು ನಿರ್ಮಾಣ ಮಾಡುತ್ತಿದ್ದು ಅರ್ಜುನ್‌ ನಿರ್ದೇಶನ ಮಾಡುತ್ತಿದ್ದಾರೆ.

9 ವರ್ಷದ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಏನಾಯ್ತು? ಜಗ್ಗೇಶ್ ಹಂಚಿಕೊಂಡ ಕಣ್ಣೀರ ಕತೆ

ಇನ್ನು ಮದುವೆ ನಂತರ ಸಿನಿಮಾದಿಂದ ದೂರ ಉಳಿದ ಶಾಂತಿ ಮಗನ ಮೊದಲ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.