ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಇಂಟಿಮೇಟ್ ರೊಮ್ಯಾನ್ಸ್ ಎಂಬ ಹೊಸ ಚಾಪು ಮೂಡಿಸಿದವರು ವಿಜಯ್ ದೇವರಕೊಂಡ. ಟಾಲಿವುಡ್‌ ಮಾತ್ರವಲ್ಲದೇ ಬಾಲಿವುಡ್, ಸ್ಯಾಂಡಲ್‌ವುಡ್ ಹಾಗೂ ಕಾಲಿವುಡ್‌ನಲ್ಲಿ ರೌಡಿ ಬಾಯ್‌ ಎಂದೇ ಫೇಮಸ್ ಆಗಿದ್ದಾರೆ.

'ಗೀತಾ ಗೋವಿಂದಂ' ಚಿತ್ರದಲ್ಲಿ ಮತ್ತೊಂದು ಹಿಟ್ ಕೊಟ್ಟು ಈಗ 'ಡಿಯರ್ ಕಾಮ್ರೇಡ್' ರಿಲೀಸ್‌ಗೆ ಕಾಯುತ್ತಿದ್ದಾರೆ. ಇನ್ನು ಫ್ರಾನ್ಸ್‌ನಲ್ಲಿ ವಿಜಯ್ ದೇವರಕೊಂಡ ಇಜಾಬೆಲ್ಲೆ ಜೊತೆ ನಾಟಿ ಪೋಸ್‌ ನೀಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡಗೆ ಕಾಂಪಿಟೇಷನ್ ಕೊಡಲು ಬಂದ ಮತ್ತೊಬ್ಬ ದೇವರಕೊಂಡ...!

'ನಾನು ತುಂಬಾ ಲಕ್ಕಿ ಈ ರೌಡಿಯನ್ನು ಕೋ- ಸ್ಟಾರ್ ಆಗಿ ಪಡೆಯುವುದಕ್ಕೆ' ಎಂದು ಬರೆದುಕೊಂಡಿದ್ದಾರೆ. ಇಜಾಬೆಲ್ಲೆ ಹಾಗೂ ವಿಜಯ್ ಇಬ್ಬರು 'ಬ್ರೇಕಪ್' ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರಕ್ಕೆ ಕ್ರಾಂತಿ ಮಾಧನ್ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ.

 

 
 
 
 
 
 
 
 
 
 
 
 
 

lucky me to have this rowdy as my co star! 🤘🏼🤪 @thedeverakonda 🇫🇷

A post shared by Izabelle Leite 🌻 (@xoizaleite) on Jun 20, 2019 at 4:39am PDT