ಬೆಂಗಳೂರು(ಸೆ.12): ರಾಜ್ಯದಾದ್ಯಂತ ಕಾವೇರಿ ಕಿಚ್ಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಿ ಎಂದು ನಟ ಸುದೀಪ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ಹೆಬ್ಬುಲಿ ಸಿನಿಮಾ ಶೂಟಿಂಗ್'ನಲ್ಲಿ ರುವ ಸುದೀಪ್ ' ನಮಗೆ ನ್ಯಾಯ ಬೇಕು. ಆದರೆ, ಹೀಗೆ ಹಿಂಸೆ ಮಾಡಬೇಡಿ. ಪ್ರಚೋದನಕಾರಿ ಸಾಲುಗಳನ್ನ ಬರೀಬೇಡಿ ಎಂದು ಟ್ವೀಟ್ ಮಾಡಿದ್ದಾರೆ. `

ಅಭಿಮಾನಿಯ ಆಕ್ರೋಶಕ್ಕೆ ಉತ್ತರಿಸಿದ ಕಿಚ್ಚ

ಶಾಂತಿ ಕಾಪಾಡಿ ಎಂದು ಟ್ವೀಟ್ ಮಾಡಿದಾಗ ಅಭಿಮಾನಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದಾಗ 'ನಮಗೆ ಅನ್ಯಾಯ ಆಗಿದೆ. ನ್ಯಾಯ ಬೇಕು. ಹೀಗೆ ಹಿಂಸೆಗೆ ಇಳಿಯೋದರಿಂದ ಹಿಂಸೆ ಹೆಚ್ಚಾಗುತ್ತದೆ. ಅದಕ್ಕೆ ಯಾರೂ ಪ್ರಚೋದನಕಾರಿ ಸಾಲುಗಳನ್ನು ಹಾಕಬೇಡಿ' ಎಂದು ಪ್ರತಿಕ್ರಿಯಿಸಿದ್ದಾರೆ ಸುದೀಪ್.

ಅವರು ಟ್ವೀಟ್ ಮಾಡಿರುವ ಲಿಂಕ್ ನೋಡಬೇಕಾದರೆ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ

https://twitter.com/KicchaSudeep