ಝೀ ಕನ್ನಡ ವಾಹಿಯಲ್ಲಿ ಮೂಡಿ ಬರುವ ಪ್ರತಿವೊಂದು ಕಾರ್ಯಕ್ರಮವು ಅದರದೇ ವಿಭಿನ್ನತೆ ಹೊಂದಿರುತ್ತದೆ. ಮನೆ ಮಂದಿಯೆಲ್ಲಾ ಕೂತು ನೋಡುವಂತಹ ಸೂಪರ್ ರಿಯಾಲಿಟಿ ಶೋ 'ಚೋಟಾ ಚಾಂಪಿಯನ್ ' ಕೂಡ ಒಂದು.

ಪುಟ್ಟ ಮಕ್ಕಳ ಆಟ ತುಂಟಾಟಕ್ಕೆ ಇನ್ನಷ್ಟು ಮೋಜು- ಮಸ್ತಿ ತುಂಬಲು ಸೃಜನ್ ಲೋಕೇಶ್ ನಿರೂಪಣೆ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳನ್ನು ನೀವೇಷ್ಟು ಅರ್ಥ ಮಾಡಿಕೊಂಡಿದ್ದೀರಾ ಎಂದು ತಿಳಿದುಕೊಳ್ಳಲು ಪೋಷಕರಿಗೊಂದು ಒಂದು ಅವಕಾಶವಾದರೆ ಮತ್ತೊಂದು ಕಡೆ ಮಕ್ಕಳ ಜಾಣ್ಮೆ ತಿಳಿದುಕೊಳ್ಳಲು ಇದೊಂದು ಅವಕಾಶ. 3 ರಿಂದ 5 ವರ್ಷದ ಮಕ್ಕಳು ಏನು ಮಾಡಲು ಸಾಧ್ಯ ಅಥವಾ ನಮ್ಮ ಮಗು ಈ ವಯಸ್ಸಲ್ಲಿ ಇಷ್ಟೊಂದು ಟ್ಯಾಲೆಂಟಿದೆ ಹೇಗೆ ಎಕ್ಸ್ ಪೋಸ್ ಮಾಡುವುದು ಎಂದು ಚಿಂತೆ ಮಾಡುತ್ತಿದ್ದರೆ ಈ ವೇದಿಕೆ ನಿಮಗಾಗಿ ಕಾದಿದೆ.

ಮುದ್ದು ಮುದ್ದಾಗಿ ತೊದಲು ಮಾತಾಡುವ ಪುಟಾಣಿ ಮಕ್ಕಳೂ ಭಾಗಿಯಾಗಲೂ 7829396111 ಗೆ WhatsApp ಮಾಡಿ ಅಥವಾ chotachampion@zee.esselgroup.comಗೆ ಮೇಲ್ ಮಾಡಿ. Audition ಬಗ್ಗೆ ಹೆಚ್ಚಿನ ಮಾಹಿತಿ ಅತೀ ಶೀಘ್ರದಲ್ಲೇ ತಿಳಿಸಲಾಗುತ್ತದೆ.