ಪುನೀತ್ ರಾಜಕುಮಾರ್ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಶ್ರೀಮುರುಳಿಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ವಿಡಿಯೋ ಅಪ್ಲೋಡ್ನಟ ದರ್ಶನ್‌ಗೆ ಚಾಲೆಂಜ್ ನೀಡಿದ ಶ್ರೀಮುರುಳಿ 

ಬೆಂಗಳೂರು(ಜೂ.8): ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ರಾಠೋಡ್ ಅವರು ಪ್ರಾರಂಭಿಸಿದ್ದ #humfittohindiafit ಅಭಿಯಾನ ಭಾರೀ ಯಶಸ್ವಿಯಾಗಿದೆ. ದೇಶದ ಖ್ಯಾತನಾಮರೆಲ್ಲಾ ಈ ಅಭಿಯಾನದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ. 

#humfittohindiafit ಅಭಿಯಾನಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ಗಳೂ ಕೂಡ ಸಾಥ್ ನೀಡಿದ್ದಾರೆ. ಸುದೀಪ್, ಯಶ್, ಪುನೀತ್ ರಾಜಕುಮಾರ್ ಸೇರಿದಂತೆ ಹಲವು ನಟರು ಈಗಾಗಲೇ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೀಡಿದ್ದ ಫಿಟ್ನೆಸ್ ಚಾಲೆಂಜ್ ನ್ನು ಸ್ಯಾಂಡಲ್ ವುಡ್ ನಟ ಶ್ರೀಮುರುಳಿ ಸ್ವೀಕರಿಸಿದ್ದಾರೆ. ತಮ್ಮ ಫಿಟ್ನೆಸ್ ವಿಡಿಯೋ ಬಿಡುಗಡೆ ಮಾಡಿರುವ ಮುರುಳಿ, ಆರೋಗ್ಯವೇ ಭಾಗ್ಯ ಎಂದು ಹೇಳಿದ್ದಾರೆ.

Scroll to load tweet…

ಇಷ್ಟೇ ಅಲ್ಲದೇ ಶ್ರೀಮುರುಳಿ ಮತ್ತೋರ್ವ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದು, ದರ್ಶನ್ ಕಸರತ್ತು ಮಾಡುವ ವಿಡಿಯೋ ನೋಡುವ ಭಾಗ್ಯ ಶೀಘ್ರದಲ್ಲೇ ದೊರೆಯಲಿದೆ.