ಕಾರ್ಮಿಕರನ್ನು ಸ್ವಂತ ಖರ್ಚಿನಲ್ಲಿ ತವರಿಗೆ ಕಳಿಸಿ ಜನ ಮೆಚ್ಚುಗೆ ಗಳಿಸಿದ ನಟ ಸೋನು ಸೂದ್ ಈಗ 170 ಜನ ಕಾರ್ಮಿಕರನ್ನು ವಿಮಾನದ ಮೂಲಕ ಊರಿಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಉತ್ತರಾಖಂಡ್‌ನ ಡೆಹ್ರಾಡೂನ್‌ಗೆ ಪ್ರಯಾಣಿಸಲು 170 ಕಾರ್ಮಿಕರಿಗೆ ಸ್ವಂತ ಖರ್ಚಿನಲ್ಲಿ ಬಜೆಟ್ ಏರ್‌ಲೈನ್‌ ಏರ್‌ ಏಷ್ಯಾ ಇಂಡಿಯಾ ವಿಮಾನದ ವ್ಯವಸ್ಥೆ ಮಾಡಿದ್ದಾರೆ ಬಾಲಿವುಡ್ ನಟ ಸೋನು ಸೂದ್.

ಅಮ್ಮನನ್ನು ಅಜ್ಜಿ ಮನೆಗೆ ಕಳ್ಸಿ, ಅಪ್ಪ ಕೇಳ್ತಿದ್ದಾರೆ; ಸೋನ್‌ ಸೂದ್‌ಗೆ ಪುಟ್ಟ ಕಂದಮ್ಮ ಮನವಿ!

ಎ320 ವಿಮಾನ 173 ವಲಸೆ ಕಾರ್ಮಿಕರನ್ನು ತುಂಬಿಕೊಂಡು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 1.57ಕ್ಕೆ ಹೊರಟಿದೆ . ವಿಮಾನ ಸಂಜೆ 4.41ಕ್ಕೆ ಜೋಲಿ ಗ್ರಾಂಟ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ ಎಂದು ಏರ್‌ ಏಷ್ಯಾ ಇಂಡಿಯಾ ವಕ್ತಾರ ತಿಳಿಸಿದ್ದಾರೆ.

ವಿಮಾನ ಮೂಲಕ 177 ಯುವತಿಯರ ತವರುನಾಡಿಗೆ ಕಳಿಸಿದ ಸೂದ್‌!

ಇನ್ನೊಂದು ವಿಮಾನ ಕಾರ್ಮಿಕರನ್ನು ಹೊತ್ತು ಸಾಗಿದೆ. ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ನಮ್ಮ ಕೆಲಸ ದೇಶದ ಹಲವು ಕಡೆ ಇನ್ನಷ್ಟು ಬಲವಾಗಿದೆ. ಅವರಲ್ಲಿ ಹೆಚ್ಚಿನವೂ ವಿಮಾನ ಪ್ರಯಾಣ ಮಾಡಿದವರೇ ಅಲ್ಲ. ತಮ್ಮ ಕುಟುಂಬವನ್ನು ಸೇರಲು ಹೊರಟ ಜನರು ವಿಮಾನವೇರಿದಾಗ ಅವರ ಮುಖದಲ್ಲಿದ್ದ ಸಂತೋಷ ನನಗೆ ನಿಜಕ್ಕೂ ಖುಷಿ ತಂದು ಕೊಟ್ಟಿದೆ ಎಂದು ಸೋ ನು ಸೂದ್ ತಿಳಿಸಿದ್ದಾರೆ. ಕಳೆದ ವಾರವಷ್ಟೇ ಸೋನು ಕೇರಳದಲ್ಲಿ ಸಿಕ್ಕಿಹಾಕಿಕೊಂಡಿದ್ದ 167 ವಲಸೆ ಕಾರ್ಮಿಕರಿಗೆ ಒಡಿಶಾ ತಲುಪಲು ವಿಮಾನ ವ್ಯವಸ್ಥೆ ಮಾಡಿದ್ದರು.