ಬೆಂಗಳೂರು (ಸೆ. 23): ಶಿವಣ್ಣ- ರಮೇಶ್ ಅರವಿಂದ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಮ್ಮೂರ ಮಂದಾರ ಹೂವೆ ಚಿತ್ರವನ್ನು ಯಾರು ಮರೆಯಲು ಸಾಧ್ಯವಿದೆ ಹೇಳಿ. ಅದರಲ್ಲೂ ಯಾಣವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ತುಂಬಾ ಅದ್ಭುತವಾಗಿ ಯಾಣವನ್ನು ತೋರಿಸಿದ್ದಾರೆ. 

20 ವರ್ಷಗಳ ನಂತರ ರಮೇಶ್ ಅರವಿಂದ್ ಯಾಣಕ್ಕೆ ಬರುತ್ತಿದ್ದಾರೆ. ನಮ್ಮೂರ ಮಂದಾರ ಹೂವೆ ಚಿತ್ರದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮತ್ತೊಮ್ಮೆ ಓ ಹೋಯ್ ಎಂದು ಯಾಣದಲ್ಲಿ ನಿಂತು ಕೂಗಿದ್ದಾರೆ.