ಸಲ್ಮಾನ್ ಖಾನ್ ನಟನೆಯ ಪ್ರಖ್ಯಾತ ಸಿನಿಮಾ 'ವಾಂಟೆಡ್'ನಲ್ಲಿ ನಟಿಸಿದ್ದ ಬಾಲಿವುಡ್ ಆ್ಯಕ್ಟರ್ ಇಂದ್ರ ಕುಮಾರ್ ಇಂದು ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಅಗಲಿಕೆಗೆ ಬಾಲಿವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ
ನವದೆಹಲಿ(ಜು.28): ಸಲ್ಮಾನ್ ಖಾನ್ ನಟನೆಯ ಪ್ರಖ್ಯಾತ ಸಿನಿಮಾ 'ವಾಂಟೆಡ್'ನಲ್ಲಿ ನಟಿಸಿದ್ದ ಬಾಲಿವುಡ್ ಆ್ಯಕ್ಟರ್ ಇಂದ್ರ ಕುಮಾರ್ ಇಂದು ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಅಗಲಿಕೆಗೆ ಬಾಲಿವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ
ಇಂದು ಮುಂಜಾನೆ 2 ಗಂಟೆಗೆ ಹೃಯಾಘಾತದಿಂದಾಗಿ ಇಂದ್ರ ಕುಮಾರ್ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. 44 ವರ್ಷದ ಇಂದ್ರ ಕುಮಾರ್ ಸಲ್ಮಾನ್ ಖಾನ್ ಜೊತೆ ಪ್ರಖ್ಯಾತ ಸಿನಿಮಾಗಳಾದ 'ತುಮ್ಕೋ ನಾ ಭೂಲ್ ಪಾಯೇಂಗೆ', 'ವಾಂಟೆಡ್', 'ಕಹೀಂ ಪ್ಯಾರ್ ನ ಹೋ ಜಾಯೆ' ಸೇರಿದಂತೆ 22ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ೀ ದಿನಗಳಲ್ಲಿ ಅವರು 'ಫಟೀ ಪಡೀ ಹೇ ಯಾರ್' ಸಿನಿಮಾ ಶೂಟಿಂಗ್'ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
1996ರಲ್ಲಿ 'ಮಾಸೂಮ್' ಸಿನಿಮಾ ಮೂಲಕ ಇವರು ತಮ್ಮ ಬಾಲಿವುಡ್'ನಲ್ಲಿ ನಟನೆಯ ವೃತ್ತಿ ಆರಂಭಿಸಿದ್ದರು. ಇನ್ನು ಸಲ್ಮಾನ್ ಖಾನ್ ನಡಿಸಿದ್ದ 'ವಾಂಟೆಡ್' ಸಿನಿಮಾದಲ್ಲಿ ನಿಭಾಯಿಸಿದ್ದ ತಮ್ಮ ಪಾತ್ರಕ್ಕೆ ಭಾರೀ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಅಲ್ಲದೇ ಸಲ್ಮಾನ್ ನಟನೆಯ ಬಹುತೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಇಂದ್ರ ಕುಮಾರ್ ಸಲ್ಮಾನ್ ಕುಟುಂಬಕ್ಕೆ ಆಪ್ತರಾಗಿದ್ದರು.
