ಹಳೆಯ ಚಿತ್ರಗಳ ಶೀರ್ಷಿಕೆಗಳನ್ನು ಹೊಸದಾಗಿ ಮರು ಬಳಕೆ ಮಾಡಿಕೊಳ್ಳುವ ಪರಂಪರೆ ಮುಂದುವರಿದ್ದು, ಈ ಸಾಲಿಗೆ ‘ನಾನೇ ರಾಜ’ ಸೇರಿಕೊಂಡಿದೆ. 1982ರಲ್ಲಿ ಬಂದ ಈ ಹೆಸರಿನ ಚಿತ್ರಕ್ಕೆ ರವಿಚಂದ್ರನ್ ನಾಯಕ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಈ ಹೊಸ ರಾಜನಿಗೆ ನಟ ಗಣೇಶ್ ಅವರ ಕಿರಿಯ ಸೋದರ ಸೂರಜ್ ಕೃಷ್ಣ ಹೀರೋ. ಅಲ್ಲಿಗೆ ಗೋಲ್ಡರ್ ಸ್ಟಾರ್ ಇಬ್ಬರು ಸೋದರರು ಚಿತ್ರರಂಗಕ್ಕೆ ಬಂದಂತಾಯಿತು.
ಮೊನ್ನೆ ಚಿತ್ರದ ಟ್ರೇಲರ್ ಬಿಡುಗಡೆ ನೆಪದಲ್ಲಿ ಚಿತ್ರತಂಡ ಪ್ರತ್ಯಕ್ಷವಾಯಿತು. ಶ್ರೀನಿವಾಸ್ ಈ ಚಿತ್ರದ ನಿರ್ದೇಶಕರು. ಈಗಾಗಲೇ ನಿರ್ದೇಶಕರಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಹಿರಿಯ ನಿರ್ದೇಶಕ ಭಾರ್ಗವ ಶಿಷ್ಯರಲ್ಲಿ ಒಬ್ಬರು. ಹೀಗಾಗಿ ತಮ್ಮ ಶಿಷ್ಯನ ಚಿತ್ರಕ್ಕೆ ಶುಭ ಕೋರಲು ಭಾರ್ಗವ ಪತ್ರಿಕಾಗೋಷ್ಟಿಗೆ ಆಗಮಿಸಿದ್ದರು. ಜತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎನ್ ಎಂ ಸುರೇಶ್ ಹಾಗೂ ಬಾ ಮಾ ಹರೀಶ್ ಮುಖ್ಯ ಅತಿಥಿಗಳಾಗಿ ಬಂದಿದ್ದರು.
ಗೀತಾ ಚಿತ್ರಕ್ಕೆ U/A ಸರ್ಟಿಫಿಕೆಟ್!
‘ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಸೂರಜ್ ಕೃಷ್ಣ ಅವರ ಲಾಂಚ್‌ಗೆ ಇದೇ ಸರಿಯಾದ ಕತೆ ಎಂದುಕೊಂಡು ಈ ಚಿತ್ರವನ್ನು ಮಾಡಿದ್ದೇನೆ. ನನ್ನ ಗುರುಗಳಿಂದ ಕಲಿತಿರುವುದನ್ನು ನಾನು ಇಲ್ಲಿ ಬಳಸಿಕೊಂಡಿದ್ದೇನೆ. ನಿರ್ದೇಶಕನಾಗಿ ನನಗಿದು ಹೊಸ ಅನುಭವ. ಈ ಕಾರಣಕ್ಕೆ ಸಿನಿಮಾ ಕೂಡ ಹೊಸದಾಗಿರುತ್ತದೆಂಬ ನಂಬಿಕೆ ಇದೆ’ ಎಂದರು ಶ್ರೀನಿವಾಸ್.
’ಗೀತಾ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಪುತ್ರ
ಸೂರಜ್ ಕೃಷ್ಣ ಅವರು ಮೊದಲ ಚಿತ್ರದಲ್ಲಿ ನಟಿಸಿದ ಸಂಭ್ರಮದಲ್ಲಿದ್ದರು. ಮಾಸ್ಟರ್ ಡಿಗ್ರಿ ಮುಗಿಸಿರುವ ಸೂರಜ್ ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕವಾದರೂ ಬಂದ ಮೇಲೆ ಇಲ್ಲಿ ಏನೇ ಕಲಿತಿದ್ದರೂ ಅದು ಅವರ ಅಣ್ಣ ಗಣೇಶ್ ಅವರಿಂದಲೇ ಎಂದರು. ಹಳ್ಳಿ ಹುಡುಗನಾಗಿ ನಟಿಸಿದ್ದು, ನಗರಕ್ಕೆ ಬಂದ ಮೇಲೆ ಏನೆಲ್ಲ ನಡೆಯುತ್ತವೆ ಎಂಬುದು ಚಿತ್ರದ ಕತೆ ಎಂದು ಸೂರಜ್ ಹೇಳಿಕೊಂಡರು. ಸೋನಿಕಾ ಗೌಡ ಚಿತ್ರದ ನಾಯಕಿ. ಚಿತ್ರದಲ್ಲಿ ಎಂ ಎಸ್ ಉಮೇಶ್ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್ ಮಾಲತಿಶ್ರೀ ಅವರು ನಾಯಕಿ ಅಜ್ಜಿಯಾಗಿ ನಟಿಸಿದ್ದಾರೆ. ಎಲ್ ಆನಂದ್ ಚಿತ್ರದ ನಿರ್ಮಾಪಕರು
