ಕಮಲ್ ಹಾಸನ್‌ಗೆ ಹುಟ್ಟುಹಬ್ಬದ ಸಂಭ್ರಮ | 64 ನೇ ವಸಂತಕ್ಕೆ ಕಾಲಿಟ್ಟ ಕಮಲ್ ಹಾಸನ್
ಚೆನ್ನೈ (ನ. 07): ಬಹುಭಾಷಾ ನಟ ಕಮಲ್ ಹಾಸನ್ ಇಂದು 64 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಅಭಿಮಾನಿಗಳು ಹಾಗೂ ಸ್ನೇಹಿತರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಕಮಲ್ ಹಾಸನ್ ಇದುವರೆಗೆ ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಂಡ್ರಮ್ ಪಿರೈ, ನಯಾಗಾನ್, ಇಂಡಿಯನ್, ಪುಷ್ಪಕ ವಿಮಾನ, ರಾಜಾ ಪಾರ್ವಾಯಿ, ಅಪೂರ್ವ ಸಾಗೋಧರ್ಗಲ್ ಸೇರಿದಂತೆ ಸಾಕಷ್ಟು ಬ್ಲಾಕ್ ಬಸ್ಟರ್ ಚಿತ್ರವನ್ನು ನೀಡಿದ್ದಾರೆ.
ಬಾಲಿವುಡ್ ನಲ್ಲಿ ಏಕ್ ದುಜೇ ಕೆಲಿಯೇ, ಚಾಚಿ ೪೨೦, ಸಾಗರ್, ಹೇ ರಾಮ್, ಸದ್ಮಾ ಸೇರಿದಂತೆ ಅನೇಕ ಸೂಪರ್ ಡೂಪರ್ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ನಾಲ್ಕು ಚಲನಚಿತ್ರ ಪ್ರಶಸ್ತಿ, ಪದ್ಮ ಭೂಷಣ್, ಪದ್ಮಶ್ರೀ, ಕಲೈಮಮನಿ ಸೇರಿದಂತೆ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಸಿನಿಮಾದಿಂದ ರಾಜಕೀಯಕ್ಕೂ ಕಾಲಿಟ್ಟಿದ್ದು ಇತ್ತೀಚಿಗೆ ಮಕ್ಕಲ್ ನಿಧಿ ಮೈಮ್ ಎನ್ನುವ ರಾಜಕೀಯ ಪಕ್ಷವನ್ನೂ ಸ್ಥಾಪಿಸಿದ್ದಾರೆ.
ಸಿನಿಮಾ ರಂಗದ ಗಣ್ಯರು, ಸೆಲಬ್ರಿಟಿಗಳು ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
