Asianet Suvarna News Asianet Suvarna News

ರಶ್ಮಿಕಾ ವಿರುದ್ಧ ತಿರುಗಿ ಬಿದ್ದ ರಕ್ಷಿತ್ ಫ್ಯಾನ್ಸ್!

ಟಾಲಿವುಡ್‌ನಲ್ಲಿ ಫುಲ್ ಬ್ಯುಸಿಯಾಗಿರುವ ರಶ್ಮಿಕಾಳ ವಿರುದ್ಧ ಕ್ರಿಯೆಟಿವ್ ಮ್ಯಾನ್ ಫ್ಯಾನ್ಸ್‌ಗಳು ಅವನೇ ಶ್ರೀಮನ್ನಾರಾಯಣ ಟೀಸರ್‌ ಹಿಡಿದು ತಿರುಗಿ ಬಿದ್ದಿದ್ದಾರೆ.

Actor Director Rakshith Shetty Fans fuming over Rashmika Mandanna on social media
Author
Bangalore, First Published Jun 8, 2019, 12:57 PM IST

ಕಾರಣಾಂತರಗಳಿಂದ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ರಕ್ಷಿತ್ ಶೆಟ್ಟಿ ಮತ್ತೆ ಹಿಂತಿರುಗಿರುವುದು ಫ್ಯಾನ್ಸ್‌ಗಳಿಗೆ ಸಂತೋಷ ತಂದಿದೆ. ಬಟ್ ಇಲ್ಲೊಂದು ವಾರ್ ಶುರು ಆಗಿರುವುದು ನಿಜ.

ರಕ್ಷಿತ್ ಚಿತ್ರ ನೋಡುತ್ತೇನೆ ಎಂದು ರಶ್ಮಿಕಾ ಮಂದಣ್ಣ

ಸ್ಟಾರ್ ನಟರೊಂದಿಗೆ ಮಾತ್ರ ಸಿನಿಮಾ ಒಪ್ಪಿಕೊಂಡು ಬ್ಯಾಕ್ ಟು ಬ್ಯಾಕ್‌ ಸಿನಿಮಾ ನೀಡುತ್ತಿರುವ ರಶ್ಮಿಕಾಳ ಕೈಯಲ್ಲಿ ಒಂದೇ ಕನ್ನಡ ಸಿನಿಮಾ ಇರುವುದು ಅದು 'ಡಿಯರ್ ಕಾಮ್ರೆಡ್' ಆದರೆ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಹಾಗೂ 'ಚಾರ್ಲಿ 777' ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಕಿರಿಕ್ ಪಾರ್ಟಿ’ಯಿಂದ ಪಾಠ ಕಲಿತ ರಕ್ಷಿತ್!

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಇರುವ ರಶ್ಮಿಕಾ ಇನ್ನು ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಯಾಕೆ ಪ್ರತ್ರಿಕ್ರಿಯೆ ನೀಡಿಲ್ಲ ಎಂಬುದು ಫ್ಯಾನ್ಸ್‌ಗಳ ಆಕ್ರೋಶ. ಇನ್ನು ಕೆಲ ಅಭಿಮಾನಿಗಳು ವಿಡಿಯೋ ಶೇರ್ ಮಾಡಿ ರಶ್ಮಿಕಾಳನ್ನು ಟ್ಯಾಗ್ ಮಾಡುತ್ತಿದ್ದಾರೆ.

 

Follow Us:
Download App:
  • android
  • ios