• ನಾನು ಯಾಕೆ ಚಿತ್ರರಂಗಕ್ಕೆ ಬಂದೆ, ಇಲ್ಲಿಗೆ ಬಂದ ಮೇಲೆ ನನಗೆ ಆದ ಅನುಭವಗಳೇನು. ಅದರಿಂದ ನಾನು ಕಲಿತ ಪಾಠಗಳು, ಸೋತು- ಗೆದ್ದ ಕ್ಷಣಗಳು, ಒಬ್ಬ ಸಾಮಾನ್ಯ ಹುಡುಗ ಕರ್ನಾಟಕಕ್ಕೆ ಗೊತ್ತಾಗುತ್ತೆ ಮಾಡಿದ ಸಿನಿಮಾ ಮಾಧ್ಯಮ. ಇವುಗಳ ನನ್ನ ಬದುಕಿನ ಜತೆ ಜತೆಗೆ ಹೇಳಿಕೊಳ್ಳುವುದಕ್ಕಾಗಿ ಈ ಪತ್ರಗಳನ್ನು ಬರೆಯುತ್ತಿರುವೆ.
  • ನನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಸಿನಿಮಾನೇ ನನ್ನ ಉಸಿರು. ಇಲ್ಲಿ ಎಷ್ಟೇ ಬಾರಿ ಸೋತರೂ ಕುಗ್ಗುವ ಮನುಷ್ಯ ನಾನಲ್ಲ. ಗೆದ್ದಾಗಲೂ ಅಹಂನಿಂದ ಬೀಗಿದವನು ನಾನಲ್ಲ. ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ, ಸೋಲು ನಮ್ಮ ಗುರಿಯನ್ನು ತೋರಿಸುತ್ತದೆ. ಅದು ಹೇಗೆ ಎಂಬುದನ್ನು ಈ ಪತ್ರಗಳಲ್ಲಿ ನಾನು ಹೇಳುತ್ತ ಹೋಗುತ್ತೇನೆ. ಜತೆಗೆ ‘ಸಲಗ’ ಸಿನಿಮಾದ ಕತೆ ನನ್ನಲ್ಲಿ ಹುಟ್ಟಿದ್ದು ಯಾಕೆ ಮತ್ತು ಹೇಗೆ ಎಂಬುದನ್ನೂ ಹೇಳುವ ಪ್ರಯತ್ನವಿದು.

  • ತುಂಬಾ ಗ್ಯಾಪ್‌ ನಂತರ ಶುರು ಮಾಡಿದ ಸಿನಿಮಾ ‘ಸಲಗ’. ಇದು ನನ್ನ ಕನಸಿನ ಸಿನಿಮಾ. ಜಯಮ್ಮನ ಮಗ ಚಿತ್ರದ ನಂತರ ನಾನು ಬರೆದಿರುವ ಎರಡನೇ ಕತೆ ಇದು. ಹಾಗೆ ನೋಡಿದರೆ ನಾನೇ ಕೂತು ಸಿದ್ದ ಮಾಡಿಕೊಂಡ ಮತ್ತೊಂದು ಕತೆ ‘ಕುಸ್ತಿ’. ಅದು ನನ್ನ ಬದುಕಿಗೆ ತೀರ ಹತ್ತಿರವಾಗುವ ಕತೆ. ಅದನ್ನು ಮುಂದಿನ ದಿನಗಳಲ್ಲಿ ಚಿತ್ರವಾಗಿಸುವೆ. ಈಗ ‘ಸಲಗ’ ಚಿತ್ರದ ಕಡೆಗೆ ನನ್ನ ಗಮನ.
  • ನಾನು ವಿದ್ಯಾರ್ಥಿಯಂತೆ ಪಟ್ಟಾಗಿ ಕೂತು ರಚನೆ ಮಾಡಿರುವ ಕತೆ ‘ಸಲಗ’ದ್ದು. ಅದಕ್ಕೆ ಮನರಂಜನೆಯ ಪಾಕದ ಜತೆಗೆ ಆ್ಯಕ್ಷನ್‌ಗೂ ಜಾಗ ಇರುವಂತೆ ಚಿತ್ರಕತೆ ಕಟ್ಟಿರುವೆ. ಪಕ್ಕಾ ಭೂಗತ ಲೋಕದ ಮತ್ತೊಂದು ನೆರಳನ್ನು ತೆರೆದಿಡುವ ಸಿನಿಮಾ. ಈ ಕಾರಣಕ್ಕೆ ವಿಶೇಷವಾದ ಲೋಕೇಶನ್‌ಗಳ ಹುಡುಕಾಟದಲ್ಲಿದ್ದೇನೆ. ನಿರ್ದೇಶಕ ಸೂರಿ ಅವರು ತಮ್ಮ ಚಿತ್ರಗಳಲ್ಲಿ ಬಳಸುತ್ತಾರೆ ತುಂಬಾ ಅಪರೂಪ ಎನಿಸುವ, ಪೆಕ್ಯೂಲರ್‌ ಜಾಗಗಳನ್ನು ಪತ್ತೆ ಮಾಡಿಕೊಳ್ಳುತ್ತಿರುವೆ.
  • ಸಲಗ ಚಿತ್ರದ ಮತ್ತೊಂದು ವಿಶೇಷ ಅಂದರೆ ಇಲ್ಲಿ ಬರುವ 15ಕ್ಕೂ ಹೆಚ್ಚು ಮುಖ್ಯ ಪಾತ್ರಗಳಲ್ಲಿ ರಂಗಾಯಣ ಹಾಗೂ ನೀನಾಸಂನಲ್ಲಿ ನಟನೆಯ ಕಲಿತವರಿಗೆ ಅವಕಾಶ ನೀಡುತ್ತಿರುವುದು. ನನಗೆ ರಂಗಭೂಮಿ ಅಂದರೆ ತುಂಬಾ ಪ್ರೀತಿ. ರಂಗಭೂಮಿಯಿಂದ ಬಂದವರು ಅದ್ಭುತ ಕಲಾವಿದರು. ಅಂತ ರಂಗಶಾಲೆಗಳಲ್ಲಿ ನಟನೆ ಕಲಿತವರಿಗೆ ‘ಸಲಗ’ ಚಿತ್ರದಲ್ಲಿ ದೊಡ್ಡ ಅವಕಾಶ ಇದೆ.
  • ಚಿತ್ರದ ನಿರ್ದೇಶಕರು ಯಾರೆಂಬುದು ಇನ್ನೂ ಘೋಷಣೆ ಮಾಡಿಲ್ಲ. ಚಿತ್ರಕ್ಕೆ ಮಾಸ್ತಿ ಅವರು ಸಂಭಾಷಣೆಗಳನ್ನು ಬರೆದಿದ್ದಾರೆ. ಚಿತ್ರದ ನಾಯಕಿ ಸೇರಿದಂತೆ ಎಲ್ಲ ತಾರಾಗಣವನ್ನು ಇನ್ನೆರಡು ವಾರಗಳಲ್ಲಿ ಹೇಳುತ್ತೇನೆ.