ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ  ಓದುತ್ತಿರುವ ವಿನೀಶ್, ಶಾಲೆಯಲ್ಲಿ ನಡೆದ ಕರಾಟೆ ಸ್ಫರ್ಧೆಯಲ್ಲಿ ವಿನೀಶ್ ವಿಜೇತನಾಗಿದ್ದಾನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ತಂದೆಯ ಹಾದಿಯಲ್ಲೇ ಸಾಗಲು ಆರಂಭಿಸಿದ್ದಾನೆ. ಇತ್ತೀಚೆಗೆ ಅಮ್ಮ ವಿಜಯಲಕ್ಷ್ಮಿ ಜೊತೆ ಬರ್ತ್​ಡೇ ಆಚರಿಸಿಕೊಂಡಿದ್ದ ವಿನೀಶ್ ಕರಾಟೆ ಪಟು. ಹೌದು ದರ್ಶನ್ ತಮ್ಮ ಮಗ ವಿನೀಶ್ ನನ್ನ ಕರಾಟೆ ಕಲಿಸಿದ್ದು ಇದರ ಫಲವಾಗಿ ವಿನೀಶ್ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ. ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ ಓದುತ್ತಿರುವ ವಿನೀಶ್, ಶಾಲೆಯಲ್ಲಿ ನಡೆದ ಕರಾಟೆ ಸ್ಫರ್ಧೆಯಲ್ಲಿ ವಿನೀಶ್ ವಿಜೇತನಾಗಿದ್ದಾನೆ. ಸದ್ಯಕ್ಕೆ ವಿನೀಶ್ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದರ್ಶನ್ ಅಭಿಮಾನಿಗಳಲ್ಲಿ ಸಂತಸ ಹೆಚ್ಚುವಂತೆ ಮಾಡಿದೆ.