ಬಾಕ್ಸ್‌ ಆಫೀಸ್ ಸುಲ್ತಾನ್ ದರ್ಶನ್ ಯಶಸ್ಸಿನ ಕಾರಣ ಪರಿಶ್ರಮ ಹಾಗೂ ಚಾಮುಂಡೇಶ್ವರಿ ಎಂದರೆ ತಪ್ಪಾಗದು. ಬೆಟ್ಟದ ಮೇಲಿರೊ ಆ ತಾಯಿಯನ್ನ ಆರಾಧಿಸುತ್ತಲೇ ಬಂದಿರುವ ದಚ್ಚು, ಪ್ರತಿ ವರ್ಷದ ಆಷಾಢ ಮೊದಲ ಶುಕ್ರವಾರ  ಮತ್ತು ಕೊನೆ ಶುಕ್ರವಾರ ಮಹಾ ತಾಯಿ ದರ್ಶನ ಪಡೆಯುತ್ತಾರೆ.   ಸಿನಿಮಾ ಮುಹೂರ್ತ, ಟ್ರೇಲರ್ ರಿಲೀಸ್, ಚಿತ್ರ ಬಿಡುಗಡೆ ಅಷ್ಟು ಮಾತ್ರವಲ್ಲ ನೆನೆದಾಗಲೆಲ್ಲಾ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.

ತೆಲುಗಿನಲ್ಲಿ ಕುರುಕ್ಷೇತ್ರ ಪ್ರಚಾರ ಮಾಡಿದ ದರ್ಶನ್! 

ಆಷಾಢ ಮಾಸದ ಶುಕ್ರವಾರ ಶ್ರೇಷ್ಠವಾರವೆಂದು ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ಆಷಾಢ ಮೊದಲ ಶುಕ್ರವಾರ ಮತ್ತು ಕೊನೆ ಶುಕ್ರವಾರ ಅಮ್ಮನಿಗೆ ಪೂಜೆ ಸಲ್ಲಿಸುತ್ತಾರೆ ಹಾಗೂ ಎಂದಿನಂತೆ ನಿನ್ನೆ (ಜೂನ್ 26)  ತಮ್ಮ ಫಾರಂ ಹೌಸ್‌ನಲ್ಲಿ ಶಕ್ತಿದೇವತೆಗೆ   ಸ್ನೇಹಿತರು ಹಾಗೂ ಆಪ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.  ತಾಯಿಯ ಕೃಪೆಗೆ ಪಾತ್ರರಾದರು .