ನಟ ಚೇತನ್ ಚಂದ್ರ ಹಾಗೂ ರಚನಾ ಹೆಗಡೆ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

'ಪಿಯುಸಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಚೇತನ್ ಚಂದ್ರ ತಂದೆಯಾದ ಸಂಭ್ರಮದಲ್ಲಿದ್ದಾರೆ. ಚೇತನ್ ಪತ್ನಿ ರಚನಾ ಹೆಗಡೆ ಆಗಸ್ಟ್‌ 23 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಂದೆಯಾಗುವ ಸಂಭ್ರಮದಲ್ಲಿದ್ದಾರೆ 'ಸತ್ಯಂ ಶಿವಂ ಸುಂದರಂ' ನಟ!

ಇನ್ ಫಾರ್ಮೇಶನ್ ಸೈನ್ಸ್‌ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಚೇತನ್ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿ ರಚನಾ ಹೆಗಡೆ ಅವರೊಂದಿಗೆ 2017 ಏಪ್ರಿಲ್ 17 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇವರು 'Soon to be Parents' ಎಂದು ಸೀಮಂತದ ಫೋಟೋ ಶೇರ್ ಮಾಡಿ ಖುಷಿಯನ್ನು ಹಂಚಿಕೊಂಡಿದ್ದರು. ಮಗಳು ಹುಟ್ಟಿದಾಕ್ಷಣ ಮಗಳ ಕೈ ಹಿಡಿದಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.