ಅಭಿಮಾನಿಗಳಿಗೆ ಶಾಕ್ ನೀಡಿದ ಜಾಕ್ವೆಲಿನ್

acqueline Fernandez Fitness Workout, Diet Secrets and Yoga Exercises
Highlights

ಜಾಕ್ವೆಲಿನ್ ಎಂಬ ಚೆಲುವೆ ಇದೀಗ ತನ್ನ  ಅಭಿಮಾನಿ ಬಂಧುಗಳಿಗೆ ಮತ್ತೊಂದು ಸಿಹಿಯಾದ ಶಾಕ್ ಅನ್ನು ನೀಡಿದ್ದಾಳೆ. ಆ ಶಾಕ್ ಏನು ಅನ್ನುವುದು ನೀವು ಆಕೆಯ ಇನ್  ಸ್ಟಗ್ರಾಮ್ ಖಾತೆ ನೋಡಿದರೆ ತಿಳಿದೀತು.

ಪೋಲ್ ಡಾನ್ಸ್ ಸ್ಪೆಷಲಿಸ್ಟ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ಬೆಡಗಿ ಜಾಕ್ವೆಲಿನ್‌ಗೆ ಬಳುಕುವ ಬಳ್ಳಿ ಎಂಬ ಹೆಸರೂ ಇದೆ. ಕಾರಣ ಹೇಳ್ತೀವಿ ಕೇಳಿ. ಅವರು ಹೇಗೆ ಬೇಕಾದರೂ ಬಳುಕುತ್ತಾರೆ ಅನ್ನುವುದು ಒಂದು ಕಾರಣವಾದರೂ ಯಾವಾಗಲೂ ಒಂದು ಕಂಬಕ್ಕೆ ಬಳ್ಳಿಯಂತೆ ಸುತ್ತಿಕೊಂಡು ಡಾನ್ಸ್ ಮಾಡುತ್ತಾರೆ ಅನ್ನುವುದು ಮತ್ತೊಂದು ಕಾರಣ.

ಜಾಕ್ವೆಲಿನ್ ಎಂಬ ಚೆಲುವೆ ಇದೀಗ ತನ್ನ ಅಭಿಮಾನಿ ಬಂಧುಗಳಿಗೆ ಮತ್ತೊಂದು ಸಿಹಿಯಾದ ಶಾಕ್ ಅನ್ನು ನೀಡಿದ್ದಾಳೆ. ಆ ಶಾಕ್ ಏನು ಅನ್ನುವುದು ನೀವು ಆಕೆಯ ಇನ್ಸ್ಟಾಗ್ರಾಮ್ ಖಾತೆ ನೋಡಿದರೆ ತಿಳಿದೀತು.

ಹೇಳಿ ಕೇಳಿ ಜಿಮ್ ಅನ್ನು ಅತಿಯಾಗಿ ಪ್ರೀತಿಸುವ ಜಾಕ್ವೆಲಿನ್ ಈ ಸಲ ಮುಖದ ತುಂಬೆಲ್ಲಾ ಚೆಂದದ ನಗು, ಉತ್ಸಾಹ ತುಂಬಿಕೊಂಡು ಟೈಟ್ ಜಿಮ್ ವೇರ್ ಧರಿಸಿ ಟ್ರೈನರ್ ಹೇಳಿದ ರೀತಿಯಲ್ಲಿ ವರ್ಕ್‌ಔಟ್ ಮಾಡುವ ವಿಡಿಯೋವನ್ನು ನೀವಲ್ಲಿ ಕಣ್ತುಂಬಿಕೊಳ್ಳಬಹುದು. ಯಾವುದೋ ಮಾಮೂಲಿ ವೀಡಿಯೋ ಆಗಿದ್ದರೆ ತಿರಸ್ಕರಿಸಬಹುದಿತ್ತು. ಆದರೆ ಜಾಕ್ವೆಲಿನ್ ಎಂಬ ಚೆಲುವೆಯ ಈ ಸಾಹಸವನ್ನು ಅಲ್ಲಗಳೆಯುವುದು ಸ್ವಲ್ಪ ಕಷ್ಟ.

ಇಲ್ಲಿ ಜಾಕ್ವೆಲಿನ್ ಎಡಗಾಲನ್ನು ನೆಲದ ಮೇಲೆ ಇರಿಸಿ, ಬಲಗಾಲನ್ನು 180  ಡಿಗ್ರಿಯಲ್ಲಿ ಮೇಲಕ್ಕೆ ಎತ್ತಿ ಎಡಗೈಯಲ್ಲಿ ಹಿಡಿದುಕೊಂಡು ಸಾಹಸ ಪ್ರದರ್ಶಿಸಿದ್ದಾರೆ. ಅಂದ್ರೆ ತಾನು  ನಿಂತಂತೆಯೇ ಒಂದು ಕಾಲನ್ನು ನೆಲದ ಮೇಲೆಯೂ ಇನ್ನೊಂದು ಕಾಲನ್ನು ಆಕಾಶ ಮುಖವಾಗಿಯೂ ಇಟ್ಟಿರುವುದು ಅಭಿಮಾನಿಗಳಿಗೆ ಭಾರಿ ಅಚ್ಚರಿಯನ್ನುಂಟು ಮಾಡಿದೆ. ಇದೆಲ್ಲಾ ಸಾಮಾನ್ಯರಿಗೆ ಸಾಧ್ಯವಿಲ್ಲ ಅನ್ನುವುದು ಆ ಅಚ್ಚರಿಯ ಹಿಂದಿನ ತಾತ್ಪರ್ಯ. ಈ ಬಗ್ಗೆ ಜಾಕ್ವೆಲಿನ್ ಫೆರ್ನಾಂಡಿಸ್, ‘ನಾನು ಈ ಟಾಸ್ಕ್ ಮಾಡುತ್ತೇನೆ ಎಂದುಕೊಂಡಿರಲೇ ಇಲ್ಲ. ನನ್ನಿಂದ ಇದು ಸಾಧ್ಯವಾಗಿದ್ದು ನನ್ನ ಜಿಮ್ ಕೋಚ್ ನೆರವಿನಿಂದ. ಕಠಿಣ ಟಾಸ್ಕ್ ಕಂಪ್ಲೀಟ್ ಮಾಡಿದ ಮೇಲೆ ನನಗೆ ನಿಜವಾಗಿಯೂ ತುಂಬಾ ಖುಷಿಯಾಗಿದೆ’ ಎಂದಿದ್ದಾರೆ. 

 

 

loader