ಅವರದ್ದೇ ಲೈಫಿನ ಘಟನೆಗಳನ್ನು ಈ ಚಿತ್ರದ ಮೂಲಕ ಹೇಳುತ್ತಿರುವೆ. ಒಂದು ರೀತಿಯಲ್ಲಿ ನಗರ ಪ್ರದೇಶದ ಮಕ್ಕಳ ಜೀವನ ಶೈಲಿಯ ಸುತ್ತ ಮಾಡಿರುವ ಸಿನಿಮಾ.

ನಿರ್ದೇಶಕಿ ಕವಿತಾ ಲಂಕೇಶ್ ‘ಕರಿಯ ಕಣ್ ಬಿಟ್ಟ’ ಚಿತ್ರದ ನಂತರ ಮತ್ತೊಂದು ಮಕ್ಕಳ ಸಿನಿಮಾ ತೆರೆಗೆ ತರುವುದಕ್ಕೆ ಸಿದ್ಧವಾಗಿದ್ದಾರೆ. ಈ ಬಾರಿ ಮೆಟ್ರೋ ನಗರಗಳ ಜೀವನ ಶೈಲಿ ಮತ್ತು ಮೆಟ್ರೋ ವಾತಾವಾರಣದಲ್ಲಿ ಬೆಳೆದ ಮಕ್ಕಳ ಯೋಚನೆ, ತಿರುಗಾಟ, ಕನಸುಗಳ ಸುತ್ತ ಸಿನಿಮಾ ಮಾಡಿದ್ದಾರೆ. ಅಲ್ಲದೆ ಕನ್ನಡದ ಜತೆಗೆ ಇಂಗ್ಲಿಷ್'ನಲ್ಲೂ ಈ ಚಿತ್ರವನ್ನು ರೂಪಿಸಿದ್ದಾರೆ. ಚಿತ್ರದ ಹೆಸರು ‘ಸಮ್ಮರ್ ಹಾಲಿಡೇಸ್’. ವಿಶೇಷ ಅಂದರೆ ಈ ಚಿತ್ರದಲ್ಲಿ ಕವಿತಾ ಲಂಕೇಶ್ ಪುತ್ರಿ ಇಶಾ ಹಾಗೂ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಥ್ ನಟಿಸಿರುವುದು.

ಗೌರಿ ಲಂಕೇಶ್, ಪ್ರಕಾಶ್ ರೈ, ಸುಮನ್ ನಗರ್‌ಕರ್ ಮುಂತಾದವರು ಅತಿಥಿ ಪಾತ್ರಗಳಲ್ಲಿ ಬಂದು ಹೋಗುತ್ತಾರೆ. ಚಿತ್ರೀಕರಣ ಮುಗಿಸಿ ತೆರೆಗೆ ತರುತ್ತಿರುವ ಹೊತ್ತಿನಲ್ಲಿ ಚಿತ್ರದ ಟ್ರೇಲರ್ ಪ್ರದರ್ಶನ ಜತೆಗೆ ಚಿತ್ರತಂಡದ ಮಾತು ಶುರುವಾಯಿತು. ‘ಇವತ್ತಿನ ಮಕ್ಕಳ ಕತೆ ಇದು.

ಅವರದ್ದೇ ಲೈಫಿನ ಘಟನೆಗಳನ್ನು ಈ ಚಿತ್ರದ ಮೂಲಕ ಹೇಳುತ್ತಿರುವೆ. ಒಂದು ರೀತಿಯಲ್ಲಿ ನಗರ ಪ್ರದೇಶದ ಮಕ್ಕಳ ಜೀವನ ಶೈಲಿಯ ಸುತ್ತ ಮಾಡಿರುವ ಸಿನಿಮಾ. ಬೇರೆ ಭಾಷೆಯ ಸಿನಿಮಾಗಳನ್ನು ನಮ್ಮ ಮಕ್ಕಳು ನೋಡುತ್ತಿದ್ದಾರೆ. ಹೀಗಾಗಿ ನಮ್ಮದೇ ಕತೆಯನ್ನು ಈಗಿನ ಮಕ್ಕಳು ನೋಡುವ ಭಾಷೆ ಯಲ್ಲೇ ಯಾಕೆ ಮಾಡಬಾರದು ಎನ್ನುವ ಯೋಚನೆಯ ಫಲವೇ ಸಮ್ಮರ್ ಹಾಲಿಡೇಸ್ ಚಿತ್ರ ಇಂಗ್ಲಿಷ್‌ನಲ್ಲಿ ಮೂಡಿಬರುವುದಕ್ಕೆ ಸಾಧ್ಯವಾಯಿತು. ಸಮಯ ಹಾಗೂ ಥಿಯೇಟರ್‌ಗಳನ್ನು ನೋಡಿಕೊಂಡು ಬಿಡುಗಡೆ ಮಾಡುತ್ತೇವೆ’ ಎಂದರು ಕವಿತಾ ಲಂಕೇಶ್. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಎಸಿ ಮಹೇಂದರ್ ಕ್ಯಾಮೆರಾ ಹಿಡಿದಿದ್ದಾರೆ. ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಯಾಗಲಿ

ರುವ ಈ ಚಿತ್ರದ ಆಡಿಯೋ ಸೀಡಿ ಸದ್ಯದಲ್ಲೇ ಹೊರಬರಲಿದೆ. ‘ನನಗೆ ಶೂಟಿಂಗ್ ಸೆಟ್ ಹೊಸದಲ್ಲ. ಯಾಕೆಂದರೆ ನಾನು ಅಮ್ಮನ ಜತೆಗೆ ಬೇರೆ ಚಿತ್ರೀಕರಣ ನಡೆಯುವಾಗ ಹೋಗುತ್ತಿದ್ದೆ. ನಮ್ಮ ವಯೋಮಾನದವರ ಕತೆ ಇದು. ಹೀಗಾಗಿ ನಾವು ಇಲ್ಲಿ ನಟಿಸಿಲ್ಲ. ನಮ್ಮಂತೆಯೇ ನಡೆದುಕೊಂಡಿದ್ದೇವೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಜೆಸ್ಸಿ.13 ವರ್ಷದ ಹುಡುಗಿ ಪಾತ್ರ. ಟ್ರೇಲರ್‌ನಲ್ಲಿ ತೋರಿಸಿರುವ ದೃಶ್ಯಗಳಿಂದ ರಾಂಗ್ ಮೆಸೇಜ್ ಹೋಗಲ್ಲ. ಯಾಕೆಂದರೆ ಈಗಿನ ಮಕ್ಕಳು ಇರುವುದೇ ಹಾಗೆ’ ಎಂಬುದು ಇಶಾ ಮಾತು.