ನಮ್ಮ ತಂದೆ ಸಲೀಂ ಖಾನ್ ಗೆ ತಮ್ಮ ಮಕ್ಕಳಲ್ಲೊಬ್ಬರು ಕ್ರಿಕೆಟರ್ ಆಗಬೇಕೆಂಬ ಅಭಿಲಾಷೆ ಇತ್ತು ಎಂದು ನಟ, ನಿರ್ದೇಶಕ, ನಿರ್ಮಾಪಕ ಸೋಹೈಲ್ ಖಾನ್ ಹೇಳಿದ್ದಾರೆ.
ಮುಂಬೈ (ಜ.31): ನಮ್ಮ ತಂದೆ ಸಲೀಂ ಖಾನ್ ಗೆ ತಮ್ಮ ಮಕ್ಕಳಲ್ಲೊಬ್ಬರು ಕ್ರಿಕೆಟರ್ ಆಗಬೇಕೆಂಬ ಅಭಿಲಾಷೆ ಇತ್ತು ಎಂದು ನಟ, ನಿರ್ದೇಶಕ, ನಿರ್ಮಾಪಕ ಸೋಹೈಲ್ ಖಾನ್ ಹೇಳಿದ್ದಾರೆ.
“ನನ್ನ ತಂದೆಗೆ ನಮ್ಮಲ್ಲೊಬ್ಬರು ಪ್ರೊಫೇಶನಲ್ ಕ್ರಿಕೆಟರ್ ಆಗಬೇಕೆಂದು ಆಸೆಯಿತ್ತು. ಮುಂಬೈನಲ್ಲಿರುವ ಖಾರ್ ಜಿಮ್ ಖಾನ ಕ್ಲಬ್ ಗೆ ನಮ್ಮನ್ನು ಆಗಾಗ ಕರೆದುಕೊಂಡು ಹೋಗುತ್ತಿದ್ದರು. ಆದರೆ ನಾವ್ಯಾರು ಕ್ರಿಕೆಟರ್ ಆಗಲು ಸಾಧ್ಯವಾಗಲಿಲ್ಲ. ಆದರೆ ನಮಗೆ ಕ್ರಿಕೆಟ್ ಬಗ್ಗೆ ಬಹಳ ಪ್ರೀತಿಯಿದೆ" ಎಂದು ಸೋಹೈಲ್ ಖಾನ್ ಹೇಳಿದ್ದಾರೆ.
ಇವರ ಅಣ್ಣ ಸಲ್ಮಾನ್ ಖಾನ್ ಕೂಡಾ ಇದೇ ಮಾತನ್ನು ಹೇಳಿದ್ದಾರೆ. ನನ್ನ ತಂದೆಗೆ ನಾನು ಕ್ರಿಕೆಟರ್ ಆಗಬೇಕೆಂದು ಆಸೆಯಿತ್ತು. ನಾನೂ ಚೆನ್ನಾಗಿ ಆಡುತ್ತೇನೆ ಆದರೆ ನಮ್ಮ ತಂದೆ ನೋಡುವುದಕ್ಕೆ ಬಂದಾಗ ಮಾತ್ರ ಕಳಪೆಯಾಗಿ ಆಡುತ್ತಿದ್ದೆ ಎಂದು ಬಜರಂಗಿ ಭಾಯಿಜಾನ್ ಹೇಳಿದ್ದಾರೆ.
