Asianet Suvarna News Asianet Suvarna News

ಮುಂದಿನ ಚಿತ್ರ ಬಿಡುಗಡೆ ಬಳಿಕ ಸಂತನಾಗಲಿದ್ದಾರೆ ನಟ ಆಮೀರ್ ಖಾನ್?

ಸಂತನಾಗಲು ಹೊರಟಿದ್ದಾರೆ ಬಾಲಿವುಡ್ ನಟ ಆಮಿರ್ ಖಾನ್? ಹೌದು ಎನ್ನುತ್ತವೆ ವರದಿಗಳು! ‘ಥಗ್ಸ್ ಆಫ್ ಹಿಂದೋಸ್ತಾನ್’ಬಿಡುಗಡೆ ಬಳಿಕ ಆಮಿರ್ ಆಗಲಿದ್ದಾರೆ‘ಸಂತ’?

Aamir Khan To Play Godman in Netflix India New original
Author
Bengaluru, First Published Sep 22, 2018, 9:10 PM IST
  • Facebook
  • Twitter
  • Whatsapp

ಬಾಲಿವುಡ್ ಬಹು ಬೇಡಿಕೆ ನಟ ಆಮಿರ್ ಖಾನ್ ನಟಿಸಿರುವ ಥಗ್ಸ್ ಆಫ್ ಹಿಂದೋಸ್ತಾನ್  ಇನ್ನೇನು ಬಿಡುಗಡೆಯಾಗಬೇಕಷ್ಟೇ. ಆದರೆ ಅದಕ್ಕಿಂತ ಮುಂಚೆಯೇ ಆಮಿರ್ ಖಾನ್ ತಮ್ಮ ಭವಿಷ್ಯದ ಬಗ್ಗೆ ಯೊಚಿಸಲು ಆರಂಭಿಸಿದ್ದಾರಂತೆ! 

ಇತ್ತೀಚಿಗಿನ ವರ್ಷಗಳಲ್ಲಿ ಆಮಿರ್ ಖಾನ್ ಫುಲ್ ಫ್ಲೆಡ್ಜ್ ಆಗಿ ನಟಿಸಿರುವ ಚಿತ್ರವೆಂದರೆ ದಂಗಲ್[2016]. ಆ ಬಳಿಕ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರವನ್ನು ನಿರ್ದೇಶಿಸದ್ದರೂ, ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಆದಾದ ಬಳಿಕ ‘ಥಗ್ಸ್ ಆಫ್ ಹಿಂದೋಸ್ತಾನ್’ಬಿಡುಗಡೆಗಾಗಿ ಸಿದ್ಧವಾಗುತ್ತಿದೆ. ಆ ಬಳಿಕ ರಿಲಾಯನ್ಸ್ ನಿರ್ಮಾಣದ ಮಹಾಭಾರತದಂಥ ಮೆಗಾ ಧಾರಾವಾಹಿ ನಿರ್ಮಿಸುತ್ತಿದ್ದು ಅದರಲ್ಲಿ ಆಮಿರ್ ನಟಿಸುವ ಬಗ್ಗೆ ಮಾತುಗಳು ಕೇಳಿಬಂದಿತ್ತು. 

ಆದರೆ ಇದೀಗ ಆಮಿರ್ ಖಾನ್ ಅವೆಲ್ಲಾವನ್ನು ಬಿಟ್ಟು ‘ಸಂತ’ನಾಗಲು ಹೊರಟಿದ್ದಾರೆಂಬ ಮಾತುಗಳು ಕೇಳಿಬಂದಿವೆ. ಅದೇ ಅವರ ಹೊಸ ಪ್ರಾಜೆಕ್ಟ್ ಆಗಿರಲಿದೆಯಂತೆ.  

ಅಂದ ಹಾಗೇ ಸಂತನಾಗಲು ಹೊರಟಿರುವುದು ನೆಟ್ ಫ್ಲಿಕ್ಸ್ ನ ವೆಬ್ ಸೀರಿಸ್ ಗಾಗಿ. ಶ್ರೀ ರಜನೀಶ್ ಓಶೋ ಜೀವನಾಧಾರಿತ ಈ ಸೀರಿಸ್ ನಲ್ಲಿ ಆಮಿರ್ ಖಾನ್ ಓಶೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಓಶೋ ಆಪ್ತ ಸಹಾಯಕಿ ಮಾ ಆನಂದ್ ಶೀಲಾ ಪಾತ್ರದಲ್ಲಿ ನಟಿ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರಂತೆ.

Follow Us:
Download App:
  • android
  • ios