ವಿವಾದ ಸೃಷ್ಟಿಸಿದ ಅಮೀರ್-ಪುತ್ರಿಯ ಫೋಟೋ..!

Aamir Khan's Pic With Daughter Ira triggered controversy
Highlights

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಪುತ್ರಿ ಜೊತೆ ಇರುವ ಫೋಟೋವೊಂದು ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಅಮೀರ್ ತಮ್ಮ ಕುಟುಂಬ ಸಮೇತ ತಮಿಳುನಾಡಿನ ಕೂನುರಿಗೆ ಬಂದಿದ್ದಾರೆ. ಬಾಲಿವುಡ್ ಹಿರಿಯ ನಿರ್ದೇಶಕ ಮನ್ಸೂರ್ ಖಾನ್ ಅವರ 60 ನೇ ಹುಟ್ಟುಹಬ್ಬ ಆಚರಿಸಲು ಅಮೀರ್ ಕುಟುಂಬ ಇಲ್ಲಿಗೆ ಬಂದಿದೆ.

ಮುಂಬೈ(ಮೇ 31): ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಪುತ್ರಿ ಜೊತೆ ಇರುವ ಫೋಟೋವೊಂದು ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಅಮೀರ್ ತಮ್ಮ ಕುಟುಂಬ ಸಮೇತ ತಮಿಳುನಾಡಿನ ಕೂನುರಿಗೆ ಬಂದಿದ್ದಾರೆ. ಬಾಲಿವುಡ್ ಹಿರಿಯ ನಿರ್ದೇಶಕ ಮನ್ಸೂರ್ ಖಾನ್ ಅವರ 60 ನೇ ಹುಟ್ಟುಹಬ್ಬ ಆಚರಿಸಲು ಅಮೀರ್ ಕುಟುಂಬ ಇಲ್ಲಿಗೆ ಬಂದಿದೆ.

ಈ ವೇಳೆ ಅಮೀರ್ ತಮ್ಮ ಪುತ್ರಿ ಇರಾ ಅವರೊಂದಿಗಿನ ಸಂತಸದ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಅಮೀರ್ ಮತ್ತು ಇರಾ ಅವರ ಭಂಗಿ ಮತ್ತು ಇರಾ ಧರಿಸಿರುವ ಬಟ್ಟೆ ಕುರಿತು ಇದೀಗ ವಿವಾದ ಭುಗಿಲೆದ್ದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ನೋಡಿದ ಕೆಲವರು, ಪವಿತ್ರ ರಂಜಾನ್ ತಿಂಗಳಿನ ಸಮಯದಲ್ಲಿ ಇಂತಹ ಅಸಭ್ಯ ಫೋಟೋ ಹಾಕಿದ್ದಾರೆ ಎಂದು ಅಮೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಿವುಡ್‌ನ ಪರ್ಫೆಕ್ಶನಿಸ್ಟ್ ನಟನಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಕೆಲವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದೇ ವೇಳೆ ಅಮೀರ್ ಮತ್ತು ಇರಾ ಅವರ ಫೋಟೋಗೆ ಕೆಲವರು ಭಾರೀ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಅಮೀರ್ ಕೇವಲ ನಟನೆಯಲ್ಲಷ್ಟೇ ಅಲ್ಲ ತಂದೆಯಾಗಿಯೂ ಪರ್ಫೆಕ್ಙನಿಸ್ಟ್ ಎಂದು ಸಾಬೀತುಪಡಿಸಿದ್ದಾರೆ ಎಂದು ಬೆಂಬಲ ಸೂಚಿಸಿದ್ದಾರೆ.

loader