ಕಚಗುಳಿ ಇಡುವಂತಿರುವ ಕೊಂಚ ಸ್ಪೈಸಿ, ಒಂಚೂರು ಡಬಲ್ ಮೀನಿಂಗ್ ಡೈಲಾಗ್‌ಗಳು ಇದ್ದರೆ ಅಂಥ ಚಿತ್ರಗಳ ಟ್ರೇಲರ್ಗಳು ಸದ್ದು ಮಾಡುತ್ತವೆ ಎಂಬುದನ್ನು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ‘ನೀರ್‌ದೋಸೆ’ ಇತ್ಯಾದಿ ಸಿನಿಮಾಗಳು ತೋರಿಸಿಕೊಟ್ಟಿವೆ. ಈಗ ಅಂಥದ್ದೇ ಕ್ರೇಜು ‘ಆದಿಪುರಾಣ’ ಚಿತ್ರದ್ದು.
ಮೂಲತಃ ಸಂಕಲನಕಾರನಾಗಿರುವ ಮೋಹನ್ ಕಾಮಾಕ್ಷಿ ನಿರ್ದೇಶನದ ಚಿತ್ರವಿದು. ಉಪೇಂದ್ರ ಬಿಡುಗಡೆ ಮಾಡಿರುವ ಈ ಚಿತ್ರದ ಟ್ರೇಲರ್ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಶಶಾಂಕ್, ಮೋಕ್ಷಾ ಕುಲಾಲ್, ಅಹಲ್ಯ ಚಿತ್ರದ ಪಾತ್ರಧಾರಿಗಳು. ಜುಲೈ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ.
