ಸ್ಯಾಂಡಲ್’ವುಡ್ ನ ಬಹುಬೇಡಿಕೆಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಓಡೋ ಕುದುರೆ ಅಂದ್ರೆ ತಪ್ಪಗಲಾರದು. ಲಾಂಗು ಮಚ್ಚು ಹಿಡಿದು ಬೇಜಾರಾಗದ ಶಿವಣ್ಣ ಅದನ್ನ ಜೊತೆಗಿಟ್ಟುಕೊಂಡು ಸ್ವಲ್ಪ ನಗಿಸೋಕು ಮುಂದಾಗಿದ್ದಾರೆ. ಮಾಸ್’ನಿಂದ ಕ್ಲಾಸ್ ಆಗುವತ್ತ ಮುಖ ಮಾಡಿದ್ದಾರೆ.ಯೋಗರಾಜ್ ಭಟ್ಟರು ಶಿವಣ್ಣ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಬರಲಿದೆ.
ಬೆಂಗಳೂರು (ನ.10): ಸ್ಯಾಂಡಲ್’ವುಡ್ ನ ಬಹುಬೇಡಿಕೆಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಓಡೋ ಕುದುರೆ ಅಂದ್ರೆ ತಪ್ಪಗಲಾರದು. ಲಾಂಗು ಮಚ್ಚು ಹಿಡಿದು ಬೇಜಾರಾಗದ ಶಿವಣ್ಣ ಅದನ್ನ ಜೊತೆಗಿಟ್ಟುಕೊಂಡು ಸ್ವಲ್ಪ ನಗಿಸೋಕು ಮುಂದಾಗಿದ್ದಾರೆ. ಮಾಸ್’ನಿಂದ ಕ್ಲಾಸ್ ಆಗುವತ್ತ ಮುಖ ಮಾಡಿದ್ದಾರೆ.ಯೋಗರಾಜ್ ಭಟ್ಟರು ಶಿವಣ್ಣ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಬರಲಿದೆ.
ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ಟರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದು , ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಸದ್ಯ ಯುವ ನಟರಾದ ಇಶಾನ್ ಮತ್ತು ಪ್ರದೀಪ್’ಗೆ ಚಿತ್ರಕಥೆ ಬರೆಯುತ್ತಿದ್ದ ಯೋಗರಾಜ ಭಟ್ಟರು ಇದೀಗ ಅದೆಲ್ಲವನ್ನೂ ಬದಿಗೆ ಇರಿಸಿ ಶಿವಣ್ಣ ಅವರಿಗೆ ಕಥೆ ಬರೆಯುತ್ತಿದ್ದಾರಂತೆ. ಆಕ್ಷನ್ ಥ್ರಿಲ್ಲರ್ ಆಗಿರುವ ಚಿತ್ರದ ಕಥೆಯ ಒಂದು ಸಾಲು ಕೇಳಿ ಶಿವಣ್ಣಗೂ ಇಷ್ಟವಾಗಿದೆ. ಆದರೆ ಶಿವಣ್ಣನ ಡೇಟ್ಸ್ ಯಾವಾಗ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಯಾಕಂದರೆ ನಾ ಮುಂದು ತಾ ಮುಂದು ಅಂತ ಬಂಡವಾಳ ಹೂಡಲಿಕ್ಕೆ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರಂತೆ. ಅವರಲ್ಲಿ ಯಾರನ್ನು ಆಯ್ಕೆ ಮಾಡ್ಕೋತಾರೆ ಅನ್ನೋದು ಕುತೂಹಲವಾಗಿದೆ.
