ಸುದೀಪ್ ಹೊಸದೇನಾದರೂ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಇದೀಗ ತಮ್ಮ ನಿರ್ಮಾಣದ ಧಾರಾವಾಹಿಯಲ್ಲಿ ಡ್ರಾಮಾ ಜ್ಯೂನಿಯರ್ಸ್​ ಖ್ಯಾತಿಯ ಚಿತ್ರಾಲಿಗೆ ಅವಕಾಶ ಕಲ್ಪಿಸಿದ್ದಾರೆ. ಈ ಧಾರಾವಾಹಿಯಲ್ಲಿ ಚಿತ್ರಾಲಿಯದೇ ಪ್ರಮುಖ ಪಾತ್ರ ಎಂಬುವುದು ಮತ್ತೊಂದು ವಿಶೇಷ.

ಬೆಂಗಳೂರು(ನ.01): ಹೊಸತನಕ್ಕೆ ಮತ್ತೊಂದು ಹೆಸರೇ ಕಿಚ್ಚ ಎನ್ನಬಹುದು. ಸುದೀಪ್ ಹೊಸದೇನಾದರೂ ಮಾಡುತ್ತಲೇ ಇರುತ್ತಾರೆ. ಈ ಅಭಿನಯ ಚಕ್ರವರ್ತಿ ನಟನೆ, ನಿರ್ಮಾಣ, ನಿರ್ದೇಶನದಲ್ಲೂ ಈಗಾಗಲೇ ವಿಭಿನ್ನ ಪ್ರಯತ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಪ್ರತಿಭೆಗಳನ್ನು ಗುರುತಿಸುವುದೂ ಕಿಚ್ಚನಿಗೆ ಗೊತ್ತು.

ಹೀಗಿರುವಾಗ ಇದೀಗ ತಮ್ಮ ನಿರ್ಮಾಣದ ಧಾರಾವಾಹಿಯಲ್ಲಿ ಡ್ರಾಮಾ ಜ್ಯೂನಿಯರ್ಸ್​ ಖ್ಯಾತಿಯ ಚಿತ್ರಾಲಿಗೆ ಅವಕಾಶ ಕಲ್ಪಿಸಿದ್ದಾರೆ. ಈ ಧಾರಾವಾಹಿಯಲ್ಲಿ ಚಿತ್ರಾಲಿಯದೇ ಪ್ರಮುಖ ಪಾತ್ರ ಎಂಬುವುದು ಮತ್ತೊಂದು ವಿಶೇಷ.