ಸಚಿನ್‌ ನಿರ್ದೇಶನದ, ರಕ್ಷಿತ್‌ ಶೆಟ್ಟಿನಟನೆಯ ಈ ಚಿತ್ರವನ್ನು ಆಗಸ್ಟ್‌ ತಿಂಗಳಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಸಿದ್ಧವಾಗಿದೆ. ಈ ಹೊತ್ತಲ್ಲಿ ‘ಅವನೇ ಶ್ರೀಮನ್ನಾರಾಯಣ’ ಯಾಕೆ ಅತಿ ಅದ್ದೂರಿ ಭಾರತೀಯ ಚಿತ್ರ ಎನ್ನುವುದಕ್ಕೆ ಪುಷ್ಕರ್‌ ಕೊಟ್ಟಕಾರಣಗಳು ಇಲ್ಲಿವೆ. ಆ ಕಾರಣಗಳೇ ಶ್ರೀಮನ್ನಾರಾಯಣನನ್ನು ಕುತೂಹಲದಿಂದ ಕಾಯುವಂತೆ ಮಾಡಿವೆ.

1. ಅತಿ ಹೆಚ್ಚು ದಿನ ಶೂಟಿಂಗ್‌ ನಡೆಸಿದ ಭಾರತದ ಎರಡನೇ ಸಿನಿಮಾ

ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನ ಶೂಟಿಂಗ್‌ ನಡೆಸಿದ ಎರಡನೇ ಚಿತ್ರ ಅನ್ನುವ ಹೆಗ್ಗಳಿಕೆ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಸಲ್ಲುತ್ತದೆ. ಮೊದಲನೇ ಸ್ಥಾನದಲ್ಲಿ ‘ಬಾಹುಬಲಿ’ ಇದೆ. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ 200ಕ್ಕೂ ಹೆಚ್ಚು ದಿನ ಶೂಟಿಂಗ್‌ ನಡೆಸಲಾಗಿದೆ. ಬಾಹುಬಲಿ ಮೊದಲ ಭಾಗಕ್ಕೆ 300 ದಿನಗಳನ್ನು ತೆಗೆದುಕೊಂಡಿರಬಹುದು. ಲೆಕ್ಕಗಳ ಪ್ರಕಾರ ಬಾಲಿವುಡ್‌ನ ಅತಿ ದೊಡ್ಡ ಸಿನಿಮಾಗಳೂ ಕೂಡ ಇಷ್ಟುದಿನ ಶೂಟಿಂಗ್‌ ಮಾಡಿಲ್ಲ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಪ್ರತಿಯೊಂದು ಫ್ರೇಮ್‌ ಕೂಡ ಅದ್ದೂರಿಯಾಗಿ ಕಾಣುವುದಕ್ಕೆ ಚಿತ್ರೀಕರಣ ಜಾಸ್ತಿ ದಿನ ತಗೊಂಡಿದ್ದೂ ಕಾರಣ.

ರಕ್ಷಿತ್ ಶೆಟ್ಟಿ ಹೈಬಜೆಟ್ ಚಿತ್ರಕ್ಕೆ 200 ದಿನ ಚಿತ್ರೀಕರಣ!

2. ಶೋಲೆ ಸಿನಿಮಾ ನಂತರ ಡಕಾಯಿತರ ಕತೆಯುಳ್ಳ ಅತಿದೊಡ್ಡ ಚಿತ್ರ

ಬಾಲಿವುಡ್‌ನ ಶೋಲೆ ಸಿನಿಮಾದ ನಂತರ ಆ ಜಾನರ್‌ನಲ್ಲಿ ಬರುತ್ತಿರುವ ದೊಡ್ಡ ಸಿನಿಮಾ ಇದು. 80ರ ದಶಕದ ಡಕಾಯಿತರ ಕತೆ ಇಲ್ಲಿದೆ. ಕಾಸ್ಟೂ್ಯಮ್‌, ಸೆಟ್‌, ವೆಹಿಕಲ್‌ ಎಲ್ಲವೂ ಆ ಕಾಲದಲ್ಲಿದ್ದಂತೆ ವಿನ್ಯಾಸ ಮಾಡಲಾಗಿದೆ. ಹಾಗೆ ನೋಡಿದರೆ ಈ ಸಿನಿಮಾವನ್ನು ಆಧುನಿಕ ಕಾಲದ ಶೋಲೆ ಎಂದು ಕರೆಯಬಹುದು.

3. ಶೇ.90 ಸೆಟ್‌ನಲ್ಲಿ ಚಿತ್ರೀಕರಣ, ಇಂಥಾ ಪ್ರಯತ್ನ ಭಾರಿ ಅಪರೂಪ

ಅದ್ಭುತವಾದ ಕೋಟೆ, ಚೆಂದದ ಕಾಲನಿ, ಆಪ್ತವೆನ್ನಿಸುವ ಪಬ್‌ ಹೀಗೆ ಸುಮಾರು 18 ಸೆಟ್‌ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಶೇ.90 ಭಾಗ ಚಿತ್ರೀಕರಣ ನಡೆದಿರುವುದು ಸೆಟ್‌ನಲ್ಲಿ. ಇಂಥಾ ಸಾಹಸ ಭಾರಿ ಅಪರೂಪ. ಬೇರೆಯವರು ಲೊಕೇಷನ್‌ಗಳಲ್ಲೇ ಸೆಟ್‌ ಹಾಕಿದರೆ ನಾವು ಲೊಕೇಷನ್‌ಗಳನ್ನೇ ಸೆಟ್‌ಗಳಲ್ಲಿ ನಮಗೆ ಬೇಕಾದಂತೆ ಸೃಷ್ಟಿಮಾಡಿದ್ದೇವೆ. ಹಾಗಾಗಿ ತೆರೆ ಮೇಲೆ ಅದ್ಭುತವಾಗಿ ಕಾಣಿಸುತ್ತದೆ. ರಕ್ಷಿತ್‌ ಶೆಟ್ಟಿಯ ಜೀಪು, ಹಳೇ ಕಾಲದ ಲಾರಿ, ಕುದುರೆ ಗಾಡಿ ಹೀಗೆ ಎಲ್ಲಾ ವೆಹಿಕಲ್‌ ಕೂಡ ಕತೆ ಹೇಳುತ್ತವೆ. ಅವೆಲ್ಲವೂ ಈ ಚಿತ್ರದ ಕ್ಯಾರೆಕ್ಟರ್‌ಗಳೇ. ಪಾತ್ರಗಳಷ್ಟೇ ಅಲ್ಲ, ಅವುಗಳೂ ಬಹುಕಾಲ ನೆನಪಲ್ಲಿ ಉಳಿಯುತ್ತವೆ.

‘ಕಿರಿಕ್ ಪಾರ್ಟಿ’ಯಿಂದ ಪಾಠ ಕಲಿತ ರಕ್ಷಿತ್!

4. ಒಂದೂವರೆ ವರ್ಷ ಬರೀ  ಸ್ಕ್ರಪ್ಟ್‌ಗೆ ಅರ್ಪಣೆ

ಈ ಚಿತ್ರ ಶುರುವಾಗಿ ಬಹುತೇಕ ಮೂರು ವರ್ಷಗಳು ಕಳೆದವು. ಅದರಲ್ಲಿ ಮೊದಲ ಒಂದೂವರೆ ವರ್ಷ ಸ್ಕಿ್ರಪ್ಟ್‌ ಮಾಡಲು ವ್ಯಯವಾಗಿತ್ತು. ಹಾಲಿವುಡ್‌ನಲ್ಲಿ ಹೇಗೆ ಸ್ಕಿ್ರಪ್ಟ್‌ ಕೆಲಸಗಳು ನಡೆಯುತ್ತವೋ ಹಾಗೇ ಇಲ್ಲಿ ಕೆಲಸ ನಡೆದಿವೆ. ರಕ್ಷಿತ್‌ ಶೆಟ್ಟಿಈ ಸ್ಕಿ್ರಪ್ಟ್‌ ಅನ್ನು ಅಂತಾರಾಷ್ಟ್ರೀಯ ಫಾರ್ಮಾಟಿಗೆ ಒಗ್ಗಿಸಿಕೊಂಡಿದ್ದಾರೆ. ಸಣ್ಣ ಸಣ್ಣ ಸೂಕ್ಷ್ಮಗಳು ಕೂಡ ಮನಸ್ಸಿಗೆ ತಟ್ಟುವಂತೆ ಬರೆದಿದ್ದಾರೆ. ಹಾಗಾಗಿಯೇ ಈ ಸಿನಿಮಾದ ಪ್ರತಿಯೊಂದು ಪಾತ್ರವೂ ತುಂಬಾ ಸಮಯ ನೆನಪಲ್ಲೇ ಇರುತ್ತದೆ.

5. ಈ ಚಿತ್ರಕ್ಕಾಗಿಯೇ ವಿಎಫ್‌ಎಕ್ಸ್‌ ಸ್ಟುಡಿಯೇ, ಆಯಾ ದಿನದ ವಿಎಫ್‌ಎಕ್ಸ್‌ ಅವತ್ತೇ

ಸಾಮಾನ್ಯವಾಗಿ ಒಂದು ಸಿನಿಮಾದ ಚಿತ್ರೀಕರಣ ಮುಗಿಸಿ ವಿಎಫ್‌ಎಕ್ಸ್‌ಗೆ ಕೆಲಸಗಳಿಗೆ ಹೋಗುವುದು ಪದ್ಧತಿ. ಆದರೆ ಅವನೇ ಶ್ರೀಮನ್ನಾರಾಯಣದ ಮೊದಲ ದಿನದ ಶೂಟಿಂಗಿನ ಫäಟೇಜ್‌ ಆ ದಿನವೇ ವಿಎಫ್‌ಎಕ್ಸ್‌ ಲ್ಯಾಬ್‌ಗೆ ಹೋಗಿತ್ತು. ಅದರ ಹಿಂದೊಂದು ಕತೆ ಇದೆ. ಅವನೇ ಶ್ರೀಮನ್ನಾರಾಯಣ ಆರಂಭವಾದಾಗಲೇ ಪಿನಾಕ ಸ್ಟುಡಿಯೋ ಶುರುವಾಯಿತು. ಅದರಲ್ಲಿ ಎಡಿಟಿಂಗ್‌, ವಿಎಫ್‌ಎಕ್ಸ್‌, ಕಲರ್‌ ಗ್ರೇಡ್‌ ಇತ್ಯಾದಿ ಕೆಲಸ ನಡೆಯುತ್ತದೆ. ಜಾಸ್ತಿ ಗಮನ ಕೊಟ್ಟಿದ್ದರಿಂದ ಅದ್ಬುತ ವಿಎಫ್‌ಎಕ್ಸ್‌ ಕೆಲಸ ನಡೆದಿದೆ. ಹೀಗೆ ಬಾಹುಬಲಿ ಚಿತ್ರದ ವಿಎಫ್‌ಎಕ್ಸ್‌ ಕೂಡ ಆಯಾಯ ದಿನವೇ ನಡೆಯುತ್ತಿತ್ತು.

6. ಅದ್ಭುತ ಕಲಾವಿದರ ಸಂಗಮ

ನಟನೆ, ಸ್ಕಿ್ರಪ್ಟು, ನಿರ್ದೇಶನ ಇವೆಲ್ಲವೂ ಗೊತ್ತಿದ್ದು, ಎಲ್ಲಾ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದ ಸ್ಟಾರ್‌ಗಳು ಎಂದರೆ ಶಂಕರ್‌ ನಾಗ್‌ ಮತ್ತು ರವಿಚಂದ್ರನ್‌. ರಕ್ಷಿತ್‌ ಶೆಟ್ಟಿಅವರ ಯಂಗರ್‌ ವರ್ಷನ್‌ ಥರ ಕಾಣಿಸುತ್ತಾರೆ. ಈ ಚಿತ್ರದಲ್ಲಿ ಅವರು ಆಲ್‌ರೌಂಡರ್‌ ಥರ ದುಡಿದಿದ್ದಾರೆ. ಅಲ್ಲದೇ ಶಾನ್ವಿ ಶ್ರೀವಾಸ್ತವ್‌, ಬಾಲಾಜಿ ಮನೋಹರ್‌, ಪ್ರಮೋದ್‌ ಶೆಟ್ಟಿಸೇರಿದಂತೆ ಎಲ್ಲಾ ಕಲಾವಿದರೂ ಅದ್ಭುತ. ಅವರಿಂದಲೇ ಇಲ್ಲಿ ಮ್ಯಾಜಿಕ್‌ ಸಂಭವಿಸಿದೆ.

7. ಕೆಜಿಎಫ್‌ಗಿಂತಲೂ ಬಜೆಟ್‌ ಜಾಸ್ತಿಯಾಗುವ ಸಾಧ್ಯತೆ!

ಈಗಾಗಲೇ ಕನ್ನಡದಲ್ಲಿ ಡಬ್ಬಿಂಗ್‌, ಎಡಿಟಿಂಗ್‌ ಮುಗಿದಿದೆ. ಬೇರೆ ಭಾಷೆಗಳಿಗೆ ಡಬ್ಬಿಂಗ್‌ಗೆ ಹೋಗಿದೆ. ಜುಲೈ 15ರಂದು ಎಲ್ಲಾ ಭಾಷೆಯ ಡಬ್ಬಿಂಗ್‌ ವರ್ಷನ್‌ಗಳು ಸಿಗಲಿವೆ. ಅಷ್ಟುಹೊತ್ತಿಗೆ ಬಹುತೇಕ ಎಲ್ಲಾ ಕೆಲಸಗಳು ಮುಗಿದಿರುತ್ತವೆ. ಆಗಸ್ಟ್‌ ತಿಂಗಳಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರ ಸಿದ್ಧವಾಗಿರುತ್ತದೆ. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಮಾಡುವ ಕೆಲಸಗಳು ನಡೆಯುತ್ತಿದೆ. ಒಂದು ಅಂದಾಜಿನ ಪ್ರಕಾರ ಇಷ್ಟೆಲ್ಲಾ ಆಗುವಾಗ ಕನ್ನಡದ ಹೆಮ್ಮೆಯಾಗಿರುವ ‘ಕೆಜಿಎಫ್‌’ ಚಿತ್ರಕ್ಕಿಂತಲೂ ಬಜೆಟ್‌ ಜಾಸ್ತಿ ಆಗುವ ಸಂಭವ ಇದೆ.