ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.
ಬೆಂಗಳೂರು(ಅ.28): ನಿರ್ದೇಶಕ ಟಿ.ಎಸ್. ನಾಗಾಭರಣ ಹೊಸ ಸಿನಿಮಾ ಶುರು ಮಾಡಿದ್ದಾರೆ. ಅದರ ಹೆಸರು ‘ಕಾನೂರಾಯಣ’. ಈ ಹಿಂದೆ ನಿರ್ದೇಶಕ ಪವನ್‌ಕುಮಾರ್ ಕ್ರೌಡ್ ಫಂಡಿಂಗ್ ಮೂಲಕ ‘ಲೂಸಿಯಾ’ ಸಿನಿಮಾ ನಿರ್ದೇಶಿಸಿದ್ದರು. ಅದೇ ಥರ ನಾಗಾಭರಣರ ಹೊಸ ಸಿನಿಮಾಗೆ 20 ಲಕ್ಷ ಮಂದಿ ಹಣ ಹೂಡಲಿದ್ದಾರಂತೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ‘ಯೋಜನೆಯ ಸುಮಾರು 20 ಲಕ್ಷ ಸದಸ್ಯರು ತಲಾ 20 ರೂ.ನಂತೆ ಹಣ ಸಂಗ್ರಹಿಸಿ ನೀಡಿದ್ದಾರೆ. ಒಟ್ಟಾರೆ 5 ಕೋಟಿ ರೂ. ಸಂಗ್ರಹ ನಿರೀಕ್ಷೆ ಇದೆ’ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ನಟ ಸ್ಕಂದ, ಸೋನುಗೌಡ, ಜಾನ್ವಿ ಜ್ಯೋತಿ, ದೊಡ್ಡಣ್ಣ, ಸುಂದರ್‌ರಾಜ್, ಗಿರಿಜಾ ಲೋಕೇಶ್ ನಟಿಸಲಿದ್ದಾರೆ.
