ಕರುಣಾನಿಧಿ ಒಬ್ಬ ರಾಜಕಾರಣಿ ಮಾತ್ರವಲ್ಲ, ಅವರೊಳಗೊಬ್ಬ ಅದ್ಭುತ ಕಲಾವಿದನಿದ್ದ. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಅವರು ಸಂಭಾಷಣಾಕಾರರಾಗಿದ್ದರು. ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. ಸಕಲಕಲಾ ವಲ್ಲಭರಾಗಿದ್ದರು. ಹಾಗಾಗಿ ಇವರಿಗೆ ’ಕಲೈನರ್’ (Scholar Of Art) ಎಂದು ಕರೆಯುತ್ತಾರೆ. ಇವರ ಪ್ರತಿಭೆಗೆ ಸಾಕ್ಷಿಯಗಿದೆ ಈ ಚಿತ್ರಗಳು.
ಚೆನ್ನೈ (ಆ. 08): ಕರುಣಾನಿಧಿ ಒಬ್ಬ ರಾಜಕಾರಣಿ ಮಾತ್ರವಲ್ಲ, ಅವರೊಳಗೊಬ್ಬ ಅದ್ಭುತ ಕಲಾವಿದನಿದ್ದ. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಅವರು ಸಂಭಾಷಣಾಕಾರರಾಗಿದ್ದರು.
ಕರುಣಾನಿಧಿಯವರ ಉತ್ತಮ ಚಿತ್ರಗಳಿವು
ರಾಜಕುಮಾರಿ (1947): ಕರುಣಾನಿಧಿ 23 ನೇ ವಯಸ್ಸಿಗೆ ಸಿನಿಮ ಜಗತ್ತಿಗೆ ಪ್ರವೇಶಿಸಿದರು. ತಮ್ಮೊಳಗಿನ ಕಲೆಗೆ ಪೆನ್ನು ಕೊಟ್ಟರು. ಅವರ ಲೇಖನಿಯಿಂದ ಅದ್ಭುತವಾದ ಸಂಭಾಷಣೆ ಮೂಡಿಬಂತು. ಅದನ್ನು ರಾಜಕುಮಾರಿಯಲ್ಲಿ ನೋಡಬಹುದು.
ಮಂಥಿರಿ ಕುಮಾರಿ (1950): ಇದು ತಮಿಳು ಮಹಾಕಾವ್ಯ ಕುಂಡಲೇಕೇಸಿ ಆಧಾರಿತವಾದದ್ದು. ಎಂಜಿಆರ್ ಗೆ ಯಶಸ್ಸನ್ನು ತಂದುಕೊಟ್ಟ ಚಿತ್ರ. ಇದು ಕರುಣಾನಿಧಿ ಟ್ಯಾಲೆಂಟ್ ಗೆ ಹಿಡಿದ ಕೈ ಗನ್ನಡಿಯಾಗಿತ್ತು. 50 ರ ದಶಕದಲ್ಲಿ ಹಿಟ್ ಚಿತ್ರವಾಗಿತ್ತು.
ಪರಶಕ್ತಿ (1952): ಶಿವಾಜಿ ಗಣೇಶನ್ ಹಾಗೂ ಎಸ್ ಎಸ್ ರಾಜೇಂದ್ರನ್ ಈ ಚಿತ್ರವನ್ನು ನೆನಪಿನಲ್ಲಿಡುವಂತೆ ಮಾಡಿದರು. ಈಗಲೂ ಇದು ಅತ್ಯುತ್ತಮ ಚಿತ್ರ ಎನ್ನುವುದರಲ್ಲಿ ಅನುಮಾನವಿಲ್ಲ.
ಮನೋಹರ (1954): ಅರಮನೆಯೊಳಗೆ ಹೇಗೆಲ್ಲಾ ಪಿತೂರಿ ನಡೆಯುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.
ರಂಗೂನ್ ರಾಧಾ (1956): ಶಿವಾಜಿ ಗಣೇಶನ್ ಅಭಿನಯದ ತ್ಯುತ್ತಮ ಚಿತ್ರಗಳಲ್ಲಿ ಇದು ಒಂದು. ಸರಳವಾದ ಕಥೆ ಮೂಲಕ ಭಾವನೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಕರುಣಾನಿಧಿ.
ಇರುವರ್ ಉಲ್ಲಮ್ (1963): ಕರುಣಾನಿಧಿ ಉತ್ತಮ ಕಥೆಗಾರರು, ಸಂಭಾಷಣೆಗಾರರು ಮಾತ್ರವಲ್ಲ. ಆಯಾ ಕಾಲಕ್ಕೆ ತಕ್ಕಂತೆ, ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡುವುದರಲ್ಲೂ ನಿಸ್ಸೀಮರು.
ಪಿಲ್ಲಯೋ ಪಿಲ್ಲೈ (1972): ಇದು 70 ರ ದಶಶದಲ್ಲಿ ಬಾರೀ ಸದ್ದು ಮಾಡಿದ ಚಿತ್ರವಿದು.
ನ್ಯಾಯ ತರಸು (1989): ಮಹಿಳಾ ಪ್ರಧಾನ ಚಿತ್ರ ಇದಾಗಿದೆ.
ಉಲಿಯಿನ್ ಓಸಾಯಿ (2008): ಇದು ಹೇಳಿಕೊಳ್ಳುವ ಚಿತ್ರವಾಗದಿದ್ದರೂ ಕಲೈನರ್ ಡೈಲಾಗ್ ಡಿಲೆವರಿ ಪ್ರೇಕ್ಷಕರನ್ನು ಇಂಪ್ರೆಸ್ ಮಾಡುವಂತಿತ್ತು.
ಪೊನ್ನರ್ ಶಂಕರ್ (2011): ಇದು ಕರುಣಾನಿಧಿಯವರ ಕೊನೆ ಚಿತ್ರ. ನಟ ಪ್ರಶಾಂತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
