ಜಾಕ್ವೆಲಿನ್ ಫೆರ್ನಾಂಡಿಸ್ ಸಖತ್ ಟಾಂಗ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 5:11 PM IST
'I am my best critic': Jacqueline Fernandez
Highlights

‘ರೇಸ್ 3’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಜಾಕ್ವೆಲಿನ್, ನನ್ನ ಬಗ್ಗೆ ಯಾರೂ ಮಾತಾಡುವುದು ಬೇಡ. ನನಗೆ ನಾನೇ ಎಲ್ಲ ಎನ್ನುವ ರೀತಿ ಮಾತಾಡಿರುವುದು ಈಗ ಕೆಲವರ ಹುಬ್ಬೇರುವಂತೆ ಮಾಡಿದೆ.

ಮುಂಬೈ (ಜು. 30): ‘ನನಗೆ ನಾನೇ ವಿಮರ್ಶಕಿ, ನನಗೆ ನಾನೇ ವಿಶ್ಲೇಷಕಿ’ ಹೀಗೆ ಹೇಳಿಕೊಂಡಿದ್ದಾರೆ ಜಾಕ್ವೆಲಿನ್ ಫೆರ್ನಾಂಡಿಸ್.

‘ರೇಸ್ 3’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಜಾಕ್ವೆಲಿನ್, ನನ್ನ ಬಗ್ಗೆ ಯಾರೂ ಮಾತಾಡುವುದು ಬೇಡ. ನನಗೆ ನಾನೇ ಎಲ್ಲ ಎನ್ನುವ ರೀತಿ ಮಾತಾಡಿರುವುದು ಈಗ ಕೆಲವರ ಹುಬ್ಬೇರುವಂತೆ ಮಾಡಿದೆ.

‘ಒಂದು ಕೆಲಸ ಮಾಡುವಾಗ ಅದರತ್ತಲೇ ಚಿತ್ತ  ಇರಬೇಕು. ನಮ್ಮ ಡೆಡಿಕೇಷನ್ ಎಲ್ಲವೂ ಅದರತ್ತಲೇ ಇದ್ದು, ಸಂಪೂರ್ಣವಾಗಿ ನಾವು ಅದರಲ್ಲಿಯೇ ಮುಳುಗಬೇಕು. ಆಗ ನಾವು ಮಾಡಿದ ಕೆಲಸ ನಿಜಕ್ಕೂ ಸುಂದರವಾಗಿ ಬಂದಿರುತ್ತದೆ’ ಎಂದು ಹೇಳಿ ಕೆಲಸದಲ್ಲಿ ತನ್ನ ಬದ್ಧತೆ ಹೇಗಿರುತ್ತದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ಇದಲ್ಲದೇ ‘ನನ್ನ ಪ್ರತಿಭೆಗೆ ಯಾರ ವಿಮರ್ಶೆ, ವಿಶ್ಲೇಷಣೆ ಬೇಕಿಲ್ಲ, ನನಗೆ ನಾನೇ ವಿಮರ್ಶಕಿ’ ಎಂದು ಹೇಳಿಕೊಳ್ಳುವ ಮೂಲಕ ಪರೋಕ್ಷವಾಗಿ ತನ್ನ ಬಗ್ಗೆ ಮಾತನಾಡುತ್ತಿದ್ದವರಿಗೆ ಟಾಂಗ್  ಕೊಟ್ಟಿದ್ದಾರೆ ಜಾಕ್ವೆಲಿನ್ ಫೆರ್ನಾಂಡಿಸ್. 

loader