ಬಾಗಲಕೋಟೆ [ಮಾ. 15]  ಬಾಗಲಕೋಟೆಯಿಂದ ಸ್ಫಧೆ೯ ಮಾಡುವಂತೆ ಸಿದ್ದರಾಮಯ್ಯ ಮತಕ್ಷೇತ್ರದ ಯುವಕ ಪ್ರಧಾನಿ‌ ಮೋದಿ ಅವರನ್ನು ವಿನಂತಿಸಿಕೊಂಡಿದ್ದಾರೆ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಿಂದ ಸ್ಫಧೆ೯ ಮಾಡುವಂತೆ  ಇಷ್ಟಲಿಂಗ ನರೇಗಲ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ: ಡಿ.ಕೆ. ಶಿವಕುಮಾರ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು..!

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ನಿವಾಸಿ ಇಷ್ಟಲಿಂಗ ಟ್ವೀಟ್ ಮಾಡಿದ್ದು, ಉತ್ತರ ಭಾರತದ ಜೊತೆಗೆ ದಕ್ಷಿಣ ಭಾರತದಲ್ಲೂ ಪ್ರಧಾನಿ ಮೋದಿ ಸ್ಫಧೆ೯ ಮಾಡಲಿ ಈ ಮೂಲಕ ದಕ್ಷಿಣ ಭಾರತದ ಮೋದಿಯವರ ಅಭಿಮಾನಿಗಳಿಗೆ ಚೈತನ್ಯದ ಜೊತೆಗೆ ಇನ್ನಷ್ಟು ಬಲ ಸಿಗಲಿದೆ. ಹೀಗಾಗಿ ಬಾಗಲಕೋಟೆಯಿಂದ ಮೋದಿಯವರು ಸ್ಫಧೆ೯ ಮಾಡಲಿ ಎಂದು ಕೇಳಿಕೊಂಡಿದ್ದಾರೆ.