ನಿಖಿಲ್ ಬಾಡಿಗೆ ಮನೆ ಸ್ಟೇಟ್‌ಮೆಂಟ್‌ಗೆ ಯಶ್ ಫ್ಯಾನ್ಸ್ ಗರಂ | ನಿಖಿಲ್ ಮೇಲೆ ಟ್ರೋಲ್‌ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ ಯಶ್ ಅಭಿಮಾನಿಗಳು | 

ಬೆಂಗಳೂರು (ಏ. 09): ನಿಖಿಲ್ ಬಾಡಿಗೆ ಮನೆ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಅಭಿಮಾನಿಗಳು ಗರಂ ಆಗಿದ್ದಾರೆ. ನಿಖಿಲ್ ರನ್ನ ಟ್ರೋಲ್ ಮಾಡಲು ಆರಂಭಿಸಿದ್ದಾರೆ ಯಶ್ ಫ್ಯಾನ್ಸ್. 

ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಯ ಮಗನೋ ಅಥವಾ ಕಿರಿಯ ಮಗನೋ ಗೊತ್ತಿಲ್ಲ. ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ’’ ಎಂದು ನಿಖಿಲ್ ಯಶ್ ಹೆಸರೆತ್ತದೇ ವ್ಯಂಗ್ಯವಾಡಿದ್ದರು. 

ಪಾಪ ಹವಾನಿಯಂತ್ರಿತ ಕಾರುಗಳಲ್ಲಿ ಕೂತು, ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಎಲ್ಲಿ ಬಿಸಿಲಿನ ಕಷ್ಟಅರ್ಥ ಆಗುತ್ತದೆ ಎಂದು ಕುಮಾರಣ್ಣ ನೀಡಿದ ಹೇಳಿಕೆ ಚೆನ್ನಾಗಿಯೇ ಇತ್ತು. ಅವರಿಗೆ ಒಂದು ಮಾತು ನೇರವಾಗಿ ಹೇಳಲು ಇಷ್ಟಡ್ತೀನಿ, ದೊಡ್ಡ ಮನುಷ್ಯರು, ಈ ಮಹಾನುಭಾವರೆಲ್ಲ ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು ಎಂದು ಪರೋಕ್ಷವಾಗಿ ಲೇವಡಿ ಮಾಡಿದ್ದರು. 

ನಿಖಿಲ್ ಈ ಹೇಳಿಕೆ ಯಶ್ ಅಭಿಮಾನಿಗಳನ್ನು ಕೆರಳಿಸಿದೆ. ನಿಖಿಲ್‌ರನ್ನು ಹೇಗೆಲ್ಲಾ ಟ್ರೋಲ್ ಮಾಡ್ತಾ ಇದ್ದಾರೆ ನೋಡಿ.