ಶಿಮ್ಲಾ[ ಮೇ. 20] ಈ ಮತಗಟ್ಟೆ ಹೊಸದೊಂದು ದಾಖಲೆ ಮಾಡಿದೆ. ಇಲ್ಲಿ ಶೇ. 100ಕ್ಕೂ ಅಧಿಕ ಅಂದರೆ ಬರೋಬ್ಬರಿ ಶೇ. 143 ರಷ್ಟು ಮತದಾನವಾಗಿದೆ. ಹೇಗೆ ಅಂತೀರಾ?

ತಾಶಿಗಂಗ್ ನಲ್ಲಿರುವ ವಿಶ್ವದ ಅತಿ ಎತ್ತರದ ಪೊಲಿಂಗ್ ಬೂತ್ ಹೊಸ ವಿಷಯಕ್ಕೆ ಸುದ್ದಿಯಾಗಿದೆ.  ಸಮುದ್ರ ಮಟ್ಟದಿಂದ 15 256 ಅಡಿ ಎತ್ತರದಲ್ಲಿರುವ ಮತಗಟ್ಟೆಯಲ್ಲಿ  ಶೇ. 142.85 ಮತದಾನವಾಗಿದೆ!

‘ರಾಹುಲ್ ಪ್ರಧಾನಿಯಾಗದಿದ್ದರೆ ಆತ್ಮಹತ್ಯೆ ಮಾಡ್ಕೋತಿನಿ’ ವೈರಲ್ ಚೆಕ್

ತಾಶಿಗಂಗ್ ನಲ್ಲಿ ಕೇವಲ 49 ಜನ ಮತದಾರರಿದ್ದಾರೆ. ಆದರೆ 70 ಮತಗಳು ಈ ಬೂತ್ ಗೆ ಸಂಬಂಧಿಸಿ ಚಲಾವಣೆಯಾಗಿದೆ. ವಿ್ಶವದ ಅತಿ ಎತ್ತರದ ಮತಗಟ್ಟೆಯಲ್ಲಿ ನಾವು ಮತದಾನ ಮಾಡೋಣ ಎಂಬ  ಮನಸ್ಥಿತಿಯಲ್ಲಿ ಹತ್ತಿರದವರು ಮತ್ತು ಕೆಲ ಅಧಿಕಾರಿಗಳು ಮತ ಚಲಾವಣೆ ಮಾಡಿರುವುದೇ ಶೇ. 143 ಏರಿಕೆಗೆ ಕಾರಣ ಎನ್ನಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.