ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು, ಕರ್ನಾಟಕದಿಂದ ಸ್ಪರ್ಧಿಸುವಂತೆ ಆಗ್ರಹಿಸಿದ್ದಾರೆ. ಇದೇ ಬೆನ್ನಲ್ಲೇ ಚಿಂತಕ ಚಕ್ರವರ್ತಿ ಸೂಲಿಬೆಲೆ #ಒಂದ್_ಕೈ_ನೋಡ್ತೀವಿ ಎಂಬ ಹ್ಯಾಷ್‌ ಟ್ಯಾಗ್‌ನಡಿ ಟ್ವೀಟ್ ಮಾಡಿದ್ದು, ಕನ್ನಡದ ಟ್ವೀಟ್ ಟ್ವೀಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. 

'ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಕರ್ನಾಟಕದಿಂದ ಆರಿಸಿದ ಪಾಪವನ್ನು, ರಾಹುಲ್ ಸೋಲಿಸುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇವೆ. ನಿಮ್ಮನ್ನ ಸೋಲಿಸಲು ಮೋದಿ ಏಕೆ? ಬರೀ ಮೋದಿ ಟೀಂ ಸಾಕು,' ಎಂದು ಚಕ್ರವರ್ತಿ ಸರಣಿ ಟ್ವೀಟ್ ಮಾಡಿದ್ದು, ಇದೀಗ #WeWillHandleHim ಹಾಗೂ #ಒಂದ್_ಕೈ_ನೋಡ್ತೀವಿ ಎಂದು ಕನ್ನಡದಲ್ಲಿಯೇ ಟ್ಟಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿವೆ.
 

 

;