ಪಾಟ್ನಾ[ಮೇ. 07] ಎರಡು ಮತಯಂತ್ರಗಳು ಮತ್ತು ವಿವಿ ಪ್ಯಾಟ್ ಮಶಿನ್ ಗಳು  ಹೊಟೆಲ್ ವೊಂದರಲ್ಲಿ ಪತ್ತೆಯಾಗಿದೆ. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಮುಜಾಫರ್ ಪುರದ ಹೊಟೇಲ್ ನಲ್ಲಿ ಮತಯಂತ್ರಗಳು ಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಸ್ವಂತ ಕಾರು ಬಿಟ್ಟು ಬೇರೆ ಕಾರು ಹತ್ತಿದ ಡಿಕೆಶಿಗೆ ತಪಾಸಣೆ ಬಿಸಿ!

ಸ್ಥಳೀಯ ಚುನಾವಣಾ ಅಧಿಕಾರಿ ಅವದೇಶ್  ಕುಮಾರ್ ಗೆ ಜಿಲ್ಲಾ ಮಾಜಿಸ್ಟ್ರೇಟ್  ಅಲೋಕ್ ರಾಜನ್ ಘೋಷ್ ಶೋಕಾಸ್ ನೋಟಿಸ್ ನೀಡಿದ್ದಾರೆ.

ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟರೆ ಬದಲಿಯಾಗಿ ನೀಡಲು  ಕೊಡಮಾಡಿದ್ದ ಮತಯಂತ್ರಗಳು ಇದಾಗಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.