ಏಳನೇಯ ಹಂತದ ಮತದಾನ ಪ್ರಕ್ರಿಯೆ ಪೂರ್ಣ| 2019ರ ಲೋಕಸಭೆ ಚುನಾವಣೆಗೆ ಅಧಿಕೃತ ತೆರೆ| ಏಳು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಮತದಾನ| ಒಟ್ಟು ಶೇ.60.21 ರಷ್ಟು ಮತದಾನ| ಮೇ.23 ರ ಫಲಿತಾಂಶದತ್ತ ದೇಶದ ಚಿತ್ತ| 

ನವದೆಹಲಿ(ಮೇ.19): ಲೋಕಸಭೆ ಚುನಾವಣೆಗೆ ಇಂದು ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಈ ಮೂಲಕ 2019ರ ಲೋಕಸಭೆ ಚುನಾವಣೆಗೆ ಅಧಿಕೃತ ತೆರೆ ಬಿದ್ದಿದೆ. ಇದೀಗ ಮೇ.23ರ ಫಲಿತಾಂಶಕ್ಕೆ ದೇಶದ ಎದುರು ನೋಡುತ್ತಿದೆ.

ಏಳು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಪ್ರಧಾನಿ ಮೋದಿ ಅವರ ವಾರಾಣಸಿ ಕ್ಷೇತ್ರದಲ್ಲೂ ಇಂದು ಮತದಾನ ಪ್ರಕ್ರಿಯೆ ಮುಗಿದಿದೆ.

ಇನ್ನು ಏಳನೇಯ ಹಂತದ ಶೇಕಡಾವಾರು ಮತದಾನದ ಕುರಿತು ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಗೆ ಅಧಿಕೃತ ತೆರೆ ಬಿದ್ದಿದೆ ಎಂದು ಘೋಷಿಸಿದೆ.

Scroll to load tweet…

ಅದರಂತೆ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಶೇಕಡಾವಾರು ಮತದಾನದತ್ತ ಗಮನಹರಿಸುವುದಾದರೆ:

ಬಿಹಾರ-ಶೇ.49.92
ಹಿಮಾಚಲ ಪ್ರದೇಶ-ಶೇ.66.18
ಮಧ್ಯಪ್ರದೇಶ-ಶೇ.69.38
ಪಂಜಾಬ್-ಶೇ.58.81
ಉತ್ತರಪ್ರದೇಶ-ಶೇ.54.37
ಪ.ಬಂಗಾಳ-ಶೇ.73.05
ಜಾರ್ಖಂಡ್-ಶೇ.70.05
ಚಂಡೀಗಡ್-ಶೇ.63.57

ಒಟ್ಟಾರೆ ಶೇ. 60.21 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಪ.ಬಂಗಾಳದ ಹಲವೆಡೆ ಹಿಂಸಾಚಾರ ನಡೆದಿದ್ದು ಬಿಟ್ಟರೆ, ಬಹುತೇಕ ಕಡೆ ಮತದಾನ ಶಾಂತಿಯುತವಾಗಿತ್ತು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.