ನವದೆಹಲಿ[ಮಾ.21]: 5 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿ ಪುನರಾಯ್ಕೆ ಬಯಸುತ್ತಿರುವ ಕರ್ನಾಟಕದ ಲೋಕಸಭಾ ಸದಸ್ಯರ ಪರವಾಗಿ ಮತದಾರರು ತೃಪ್ತಿ ವ್ಯಕ್ತಪಡಿಸಿರುವ ಸಂಗತಿ ಸಮೀಕ್ಷೆಯೊಂದರಲ್ಲಿ ಬೆಳಕಿಗೆ ಬಂದಿದೆ. ಉತ್ತರಪ್ರದೇಶ, ತಮಿಳುನಾಡು, ಆಂಧ್ರ, ಬಿಹಾರದಂತಹ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸಂಸದರ ಕಾರ್ಯನಿರ್ವಹಣೆ ಬಗ್ಗೆ ಜನರಿಗೆ ಹೆಚ್ಚು ತೃಪ್ತಿ ಇದೆ ಎಂದು ಸಿವೋಟರ್‌- ಐಎಎನ್‌ಎಸ್‌ ಸುದ್ದಿಸಂಸ್ಥೆಗಳು ನಡೆಸಿರುವ ಈ ಸಮೀಕ್ಷೆ ತಿಳಿಸಿವೆ.

ವಿಶೇಷ ಎಂದರೆ, ಕೇರಳದಲ್ಲಿ ಸಮೀಕ್ಷೆಯಲ್ಲಿ ಭಾಗಿಯಾದ ಅರ್ಧಕ್ಕಿಂತ ಹೆಚ್ಚು ಜನರು ತಮ್ಮ ಸಂಸದರ ಕಾರ್ಯವೈಖರಿಗೆ ಸಂಪೂರ್ಣ ತೃಪ್ತಿ ಸೂಚಿಸಿದ್ದಾರೆ. ಮತದಾರರು ಹೆಚ್ಚು ತೃಪ್ತಿ ವ್ಯಕ್ತಪಡಿಸಿದ ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ, ತೆಲಂಗಾಣ, ಹರಾರ‍ಯಣ ಹಾಗೂ ಕರ್ನಾಟಕ ಇವೆ. ಕರ್ನಾಟಕದಲ್ಲಿ 12191 ಜನರಿಂದ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. ಶೇ.32ರಷ್ಟುಮಂದಿಗೆ ತಮಗೆ ಸಂಪೂರ್ಣ ತೃಪ್ತಿ ಇದೆ ಎಂದು ಹೇಳಿಕೊಂಡಿದ್ದರೆ, ಪರವಾಗಿಲ್ಲ ಎಂದು ಶೇ.31.9 ಮಂದಿ ತಿಳಿಸಿದ್ದಾರೆ. ತೃಪ್ತಿದಾಯಕವಾಗಿಲ್ಲ ಎಂದು ಶೇ.29.5ರಷ್ಟುಜನರು ತಿಳಿಸಿದ್ದಾರೆ.

ಉತ್ತರಾಖಂಡ, ತಮಿಳುನಾಡು ಹಾಗೂ ಉತ್ತರಪ್ರದೇಶ ರಾಜ್ಯಗಳು ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆ ಇದ್ದು, ಕಳೆದ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನೇ ಆಯ್ಕೆ ಮಾಡಿದ್ದವು. ಇಲ್ಲಿನ ಜನರು ಸಂಸದರ ಸಾಧನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಟಾಪ್‌ 3

- ನಂ.1: ಕೇರಳ: ಶೇ.44.4

- ನಂ.2: ರಾಜಸ್ಥಾನ: ಶೇ.43.4

- ನಂ.3: ಗುಜರಾತ್‌: ಶೇ.40.4

ಕರ್ನಾಟಕಕ್ಕೆ 7ನೇ ಸ್ಥಾನ: ಶೇ.34.4

 

ಲಾಸ್ಟ್‌ 3

- ನಂ.1: ಉತ್ತರಾಖಂಡ: ಶೇ.-4.1

- ನಂ.2: ತಮಿಳುನಾಡು: ಶೇ.1.5

- ನಂ.3: ಉತ್ತರಪ್ರದೇಶ: ಶೆ.8.2